Job Description: * ಪ್ರತಿ ವರ್ಷವು ಡಿಸೆಂಬರ್. 10 ನ್ನು "ವಿಶ್ವ ಮಾನವ ಹಕ್ಕುಗಳ ದಿನ"ವಾಗಿ ಆಚರಣೆ ಮಾಡುತ್ತಾರೆ, ಹಾಗೂ ಈ ದಿನದಂದು ಬೇರೆ ವ್ಯಕ್ತಿಗಳ ಸ್ವಾತಂತ್ರ್ಯವನ್ನು ಗೌರವಿಸಿ ಬದುಕುವುದು, ಮತ್ತು ಮಾನವ ಹಕ್ಕುಗಳನ್ನು ಪಾಲನೆ ಮಾಡುವದು ಈ ದಿನದ ವಿಶೇಷವಾಗಿದೆ. * ಈ ಹಿಂದೆ 1948 ರಲ್ಲಿ ವಿಶ್ವಸಂಸ್ಥೆಯು ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಈ ದಿನವನ್ನು ಅಂಗೀಕರಿಸಲಾಗಿದೆ. * ಪ್ರಸ್ತುತ ಭಾರತದಲ್ಲಿ ಸಂವಿಧಾನ ರಚಿಸುತ್ತಿರುವ ಸಂಧರ್ಭದಲ್ಲಿ ವಿಶ್ವಸಂಸ್ಥೆಯು ಈ ಮಾನವ ಹಕ್ಕುಗಳನ್ನು ಘೋಷಣೆ ಮಾಡಿದೆ. * ಇದೀಗ ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸಮಾನತೆ ಹಾಗೂ ಆ ವ್ಯಕ್ತಿಗೆ ಸಲ್ಲಬೇಕಾಗಿರುವ ಘನತೆಯ ಬಗೆಗಿನ ಹಕ್ಕುಗಳ ಬಗ್ಗೆ ಜನರಲ್ಲಿ ತಿಳಿಹೇಳಲು ಈ ಮಾನವ ಹಕ್ಕುಗಳ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಮಾನವ ಹಕ್ಕುಗಳ ದಿನವನ್ನು ಘೋಷಣೆ ಮಾಡಲಾಗಿದೆ. * 2021 ನೇ ವರ್ಷದ ಮಾನವ ಹಕ್ಕುಗಳ ದಿನದ ಧ್ಯೆಯೇವಾಕ್ಯ: ದೇಶದಲ್ಲಿ ಅಸಮಾನತೆ ಕಡಿಮೆ ಮಾಡುವುದು, ಹಾಗೂ ಮಾನವ ಹಕ್ಕುಗಳನ್ನು ಮುನ್ನಡೆಸುವುದು ಎಂಬ ವಿಷಯದಡಿಯಲ್ಲಿ ಆಚರಿಸಲಾಗಿದೆ. * ಪ್ರಸ್ತುತ ಯಾವುದೇ ಧರ್ಮ, ಲಿಂಗ, ಜನಾಂಗ, ಬಣ್ಣ, ಭಾಷೆ, ರಾಜಕೀಯ ಅಥವಾ ಇತರೆ ಅಭಿಪ್ರಾಯಗಳು, ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲರು ಸಮಾನರು, ಹಾಗೂ ಸಂಪೂರ್ಣ ಹಕ್ಕುಗಳನ್ನು ಹೊಂದಿದ್ದಾರೆ ಎಂಬುವದೆ ಮಾನವ ಹಕ್ಕುಗಳ ಉದ್ದೇಶವಾಗಿದೆ.