Job Description: * ಪ್ರಸ್ತುತ ಕೇಂದ್ರ ಸರ್ಕಾರವು ಉತ್ತರಾಖಂಡ ಮತ್ತು ತಮಿಳುನಾಡು ರಾಜ್ಯಗಳಲ್ಲಿನ ಯೋಜನೆಗಳಿಗೆ ಎರಡು ಸಾಲ ಒಪ್ಪಂದಗಳಿಗೆ ಸಹಿ ಹಾಕಿದೆ. * ತಮಿಳನಾಡು ರಾಜ್ಯದಲ್ಲಿ ಕೈಗೆಟುಕುವ ದರದ ವಸತಿ ಯೋಜನೆ, ಹಾಗೂ ಉತ್ತರಾಖಂಡದಲ್ಲಿ ನೀರು ನೈರ್ಮಲ್ಯ ಕಾರ್ಯಕ್ರಮಕ್ಕಾಗಿ 2,074 ಕೋಟಿ ರೂ. ಸಾಲ ಒಪ್ಪಂದವನ್ನು ಬಳಸಲಾಗುತ್ತದೆ. * ಇದೀಗ ಭಾರತ ಸರ್ಕಾರ ಮತ್ತು ADB (Asian Development Bank) ತಮಿಳುನಾಡು ರಾಜ್ಯದ ನಗರ ಬಡವರಿಗೆ ಸ್ಥಿತಿಸ್ಥಾಪಕ, ಅಂತರ್ಗತ ಮತ್ತು ಸುಸ್ಥಿರ ವಸತಿಗೆ ಪ್ರವೇಶವನ್ನು ಒದಗಿಸಲು USD 150 ಮಿಲಿಯನ್ ಸಾಲ ಒಪ್ಪಂದಕ್ಕೆ ಸಹಿ ಹಾಕಿದೆ. * ಉತ್ತರಾಖಂಡದ ಡೆಹ್ರಾಡೂನ್ ಮತ್ತು ನೈನಿತಾಲ್ನಲ್ಲಿ ಸುರಕ್ಷಿತ ಮತ್ತು ಕೈಗೆಟುಕುವ ಕುಡಿಯುವ ನೀರು ಪೂರೈಕೆ ಸೇವೆಗಳನ್ನು ಸುಧಾರಿಸಲು USD 125 ಮಿಲಿಯನ್ ಸಾಲ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. * ಇದೀಗ ತಮಿಳುನಾಡಿನಲ್ಲಿನ ತ್ವರಿತ ನಗರೀಕರಣ ಮತ್ತು ಬೆಳವಣಿಗೆಯು ಕಡಿಮೆ ಆದಾಯದ ಕುಟುಂಬಗಳಿಗೆ ವಸತಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ, ಈ ಯೋಜನೆಯಿಂದಾಗಿ ರಾಜ್ಯದಲ್ಲಿನ ಕುಟುಂಬಗಳಿಗೆ ಕೈಗೆಟುಕುವ ವಸತಿ ಮೂಲಸೌಕರ್ಯ ಮತ್ತು ಸೇವೆಗಳನ್ನು ನೀಡಲು ಸಹಾಯ ಮಾಡುತ್ತದೆ. * ಈ ಸಾಲದ ಯೋಜನೆಯು ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್ ಮತ್ತು ನೈನಿತಾಲ್ನಲ್ಲಿನ ನೀರು ಮತ್ತು ನೈರ್ಮಲ್ಯ ಸೇವೆಗಳು ಉತ್ತೇಜಿಸಲು, ಹಾಗೂ ಸಾಂಕ್ರಾಮಿಕ ರೋಗಗಳಿಂದ ಜನರನ್ನು ರಕ್ಷಿಸಲು ಸಹಾಯ ಮಾಡುತ್ತದೆ.