Job Description: * ಇದೀಗ ಕೇಂದ್ರ ಸಚಿವ ಸಂಪುಟವು ಕೆನ್-ಬೆಟ್ವಾ ನದಿಯನ್ನು ಜೋಡಿಸುವ ಯೋಜನೆಗೆ ಅನುಮೋದನೆ ನೀಡಿದೆ. * ಈ ಕೆನ್-ಬೆಟ್ವಾ ರಿವರ್ ಇಂಟರ್ಲಿಂಕಿಂಗ್ ಯೋಜನೆಯು ಸುಮಾರು 44,605-ಕೋಟಿ ರೂ.ಗಳ ಯೋಜನೆಯಾಗಿದೆ. * ಈ ಯೋಜನೆಯು ಮಧ್ಯಪ್ರದೇಶ, ಹಾಗೂ ಉತ್ತರ ಪ್ರದೇಶದ ಬುಂದೇಲ್ಖಂಡ್ ಪ್ರದೇಶದ ನೀರಿನ ಸಮಸ್ಯೆಯನ್ನು ಬಗೆಹರಿಸಲಿದೆ ಎಂದಿದ್ದಾರೆ. * ಕೆನ್-ಬೆಟ್ವಾ ಯೋಜನೆಯ ಬರಪೀಡಿತ ಬುಂದೇಲ್ಖಂಡ್ ಪ್ರದೇಶಕ್ಕೆ ನೀರಿನ ಸಮಸ್ಯೆಯನ್ನು ನೀಗಿಸಲಿದೆ, ಈ ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯು ಹೆಚ್ಚುವರಿ ನೀರನ್ನು ಮಧ್ಯಪ್ರದೇಶದ ಕೆನ್ ನದಿಯಿಂದ ಉತ್ತರ ಪ್ರದೇಶದ ಬೇಟ್ವಾ ನದಿಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * MP ಹಾಗೂ UP ರಾಜ್ಯಗಳ ಜಿಲ್ಲೆಗಳಲ್ಲಿ ಬುಂದೇಲ್ಖಂಡ್ ಪ್ರದೇಶವು ವ್ಯಾಪಿಸಿದೆ. * ಈ ಯೋಜನೆಯಿಂದಾಗಿ ಸುಮಾರು 1.06 ಮಿಲಿಯನ್ ಹೆಕ್ಟೇರ್ಗಳಲ್ಲಿ ವಾರ್ಷಿಕ ನೀರಾವರಿ, ಹಾಗೂ ಸರಿ ಸುಮಾರು 6.2 ಮಿಲಿಯನ್ ಜನರಿಗೆ ಕುಡಿಯುವ ನೀರುನ್ನು ಕಲ್ಪಿಸಲಾಗುವದು, ಮತ್ತು 103 Mw ಜಲವಿದ್ಯುತ್, ಜೊತೆಗೆ 27 Mw ಸೌರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.