Job Description: * ಇದೀಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬ್ರಾಂಡ್ಸ್ (IIHB) ವಾರ್ಷಿಕ ಸಮೀಕ್ಷೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ, ಈ ಸಮೀಕ್ಷೆಯ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಪವರ್ ಜೋಡಿಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. - ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರ ಜೋಡಿಯು 2 ನೇ ಸ್ಥಾನ ಪಡೆದಿದೆ. - ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಜೋಡಿಯು 3 ನೇ ಸ್ಥಾನ ಪಡೆದಿದೆ. - ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರಿಗೆ 10 ನೇ ಸ್ಥಾನ. - ಸೆರಮ್ ಇನ್ಸ್ಟಿಟ್ಯೂಟ್ ಮುಖ್ಯಸ್ಥರು, ಅದಾರ್ ಮತ್ತು ನತಾಶಾ ಪೂನಾವಾಲಾ ಅವರಿಗೆ 11 ನೇ ಸ್ಥಾನ. - ವಿಪ್ರೋ ಸಂಸ್ಥೆಯ ಮುಖ್ಯಸ್ಥರು, ಅಜೀಂ ಮತ್ತು ಯಾಸ್ಮೀನ್ ಪ್ರೇಮ್ಜಿ ಅವರಿಗೆ 16 ನೇ ಸ್ಥಾನ. - ಮಹೀಂದ್ರಾ ಸಮೂಹದ ಮುಖ್ಯಸ್ಥರಾಗಿರುವ, ಆನಂದ್ ಮತ್ತು ಅನುರಾಧಾ ಮಹೀಂದ್ರಾ ಅವರಿಗೆ 19 ನೇ ಸ್ಥಾನ. - ಆದಿತ್ಯ ಬಿರ್ಲಾ ಗ್ರೂಪ್ನ ಮುಖ್ಯಸ್ಥರಾಗಿರುವ, ಕುಮಾರ್ ಮಂಗಳಂ ಮತ್ತು ನೀರ್ಜಾ ಬಿರ್ಲಾ ಅವರಿಗೆ 20 ನೇ ಸ್ಥಾನ. * ಇದೇ ಮೊದಲ ಬಾರಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬ್ರಾಂಡ್ಸ್ (IIHB)ನ ವಾರ್ಷಿಕ ಸಮೀಕ್ಷೆಯ ಪಟ್ಟಿಯಲ್ಲಿ ವ್ಯಾಪಾರ ದಂಪತಿಗಳನ್ನು ಸೇರ್ಪಡೆ ಮಾಡಲಾಗಿದೆ. * ಮುಖೇಶ್ ಧೀರೂಭಾಯಿ ಅಂಬಾನಿ ಭಾರತೀಯ ಬಿಲಿಯನೇರ್ ಉದ್ಯಮಿಯಾಗಿದ್ದಾರೆ, ಇದೀಗ ಇವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ವಿಶ್ವದ 11 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.