Job Description: * ಪ್ರಸ್ತುತ ಮುಂಬರುವ 2023 ರಲ್ಲಿ ಭಾರತದ ಮೊದಲ ಬಾಹ್ಯಾಕಾಶ ಮಿಷನ್ ಗಗನಯಾನವನ್ನು ಉಡಾವಣೆ ಮಾಡಲಾಗುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ತಿಳಿಸಿದ್ದಾರೆ. * ಇದೀಗ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾನವ ಬಾಹ್ಯಾಕಾಶ ಯಾನದ ಕಾರ್ಯಾಚರಣೆಯನ್ನು ಆರಂಭಿಸಿವೆ, ಇದೀಗ ಭಾರತವು ಕೂಡ ಆ ಸಲಿಗೆ ಸೇರಲಿದೆ. * ಪ್ರಸ್ತುತ ಭಾರತವು ಮಾನವ ಬಾಹ್ಯಾಕಾಶ ಯಾನದ ಕಾರ್ಯಾಚರಣೆಯನ್ನು ಆರಂಭಿಸಿರುವ ವಿಶ್ವದ 4 ನೇ ರಾಷ್ಟ್ರವಾಗಲಿದೆ ಎಂದಿದ್ದಾರೆ. * ಇದೇ 2022 ರ ದ್ವಿತೀಯಾರ್ಧದ ಪ್ರಾರಂಭದಲ್ಲಿ ಈ ಕ್ರೂ ಎಸ್ಕೇಪ್ ಸಿಸ್ಟಮ್ ಕಾರ್ಯಕ್ಷಮತೆಯ ಪ್ರಮಾಣೀಕರಣಕ್ಕಾಗಿ ಪರೀಕ್ಷಾ ವಾಹನ ಹಾರಾಟ ಮತ್ತು ಗಗನಯಾನದ ಮೊದಲ ಅನ್ ಕ್ರೂಡ್ ಮಿಷನ್'ನ್ನು ನಿಯೋಜಿಸಲಾಗಿದೆ, ಇದಾದ ಬಳಿಕ 2022 ರ ಕೊನೆಯಲ್ಲಿ ಇಸ್ರೋ ಅಭಿವೃದ್ಧಿಪಡಿಸಿದ ಬಾಹ್ಯಾಕಾಶ ಮಾನವ-ರೋಬೋಟ್ 'ವ್ಯೋಮಿತ್ರ' ಹಾಗೂ ಅಂತಿಮವಾಗಿ 2023 ರಲ್ಲಿ ಮೊದಲ ಮಾನವ ಸಹಿತ ಗಗನಯಾನ ಮಿಷನ್ (ಗಗನಯಾನ ಮಿಷನ್ 2023)ನ್ನು ಹೊತ್ತ 2 ನೇ ಅನ್ ಕ್ರೂಡ್ ಮಿಷನ್ ನಡೆಯಲಿದೆ ಎಂದು ತಿಳಿಸಿದ್ದಾರೆ.