Job Description: * ಇದೀಗ ದೇಶದಲ್ಲೇ ಕೋವಿಡ್-19 ಗೆ ಮೊದಲ ಡೋಸ್ ಲಸಿಕೆ ನೀಡುವಲ್ಲಿ ಕರ್ನಾಟಕ ರಾಜ್ಯವು ಮೊದಲ ಸ್ಥಾನದಲ್ಲಿದೆ. * ಪ್ರಸ್ತುತ ಕರ್ನಾಟಕ ರಾಜ್ಯವು ಶೇ.94.38 ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಿದೆ ಎಂಬ ಮಾಹಿತಿಯನ್ನು ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಟ್ವಿಟ್ಟರ್ ನ ಮೂಲಕ ತಿಳಿಸಿದ್ದಾರೆ. * ಕರ್ನಾಟಕ ರಾಜ್ಯದಲ್ಲಿ ಇದೇ ಡಿಸೆಂಬರ್. 08 ರ ಮಾಹಿತಿ ಪ್ರಕಾರ ಮೊದಲ ಡೋಸ್ ಲಸಿಕೆಯನ್ನು ಸುಮಾರು ಶೇ.94.38 ರಷ್ಟು ಜನರಿಗೆ ನೀಡಲಾಗಿದೆ ಎಂದಿದ್ದಾರೆ. * ಇದೀಗ ಕರ್ನಾಟಕ ರಾಜ್ಯವು ಸುಮಾರು 4,61,69,227 ಜನರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಿದೆ, ಹಾಗೂ 2ನೇ ಡೋಸ್ ಲಸಿಕೆಯನ್ನು 3,28,94,280 ಜನರಿಗೆ ನೀಡಿದೆ. * ಗುಜರಾತ್ ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆಯನ್ನು 4,61,54,564 ಜನರಿಗೆ ನೀಡಲಾಗಿದೆ, ಶೇ. 94.37 ರಷ್ಟು ಲಸಿಕೆ ನೀಡಲಾಗಿದೆ, ಈ ರಾಜ್ಯವು 2 ನೇ ಸ್ಥಾನದಲ್ಲಿದೆ. * ಮಧ್ಯಪ್ರದೇಶ ರಾಜ್ಯವು ಶೇ.93.77 ರಷ್ಟು ಲಸಿಕೆಯನ್ನು ಮೊದಲ ಡೋಸ್ ನೀಡಿ 3 ನೇ ಸ್ಥಾನದಲ್ಲಿದೆ.