Job Description: * ಇದೀಗ ನ್ಯೂಜಿಲೆಂಡ್ ಸರ್ಕಾರವು ತಂಬಾಕು, ಧೂಮಪಾನವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಧೂಮಪಾನ ಮುಕ್ತ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿದೆ, ಈ ಯೋಜನೆಯು 2025 ರ ವೇಳೆಗೆ ನ್ಯೂಜಿಲೆಂಡ್ನಲ್ಲಿ ಧೂಮಪಾನವನ್ನು 5% ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. * ಈ ಧೂಮಪಾನ ಮುಕ್ತ ಕ್ರಿಯಾ ಯೋಜನೆಯ ಅಡಿಯಲ್ಲಿ ಜನರು ತಮ್ಮ ಜೀವಿತಾವಧಿಯಲ್ಲಿ ಸಿಗರೇಟ್ ಖರೀದಿಸುವುದನ್ನು ನಿಷೇಧಿಸಲಾಗುತ್ತದೆ. * ಇದೀಗ ಈ ಕ್ರಿಯಾ ಯೋಜನೆಯ ಅಡಿಯಲ್ಲಿ ನ್ಯೂಜಿಲೆಂಡ್ನಲ್ಲಿ ಸಿಗರೇಟ್ ಖರೀದಿಸಲು ಕನಿಷ್ಠ ವಯಸ್ಸು 18 ದಾಟಿರಬೇಕು. * ಪ್ರಸ್ತುತ ನ್ಯೂಜಿಲೆಂಡ್ನಲ್ಲಿ ಜನರ ಸಾವಿಗೆ ಧೂಮಪಾನವು ಪ್ರಮುಖ ಕಾರಣವಾಗಿದೆ ಎಂದು ಅಲ್ಲಿನ ಅಸೋಸಿಯೇಟ್ ಆರೋಗ್ಯ ಸಚಿವೆ ಡಾ. ಆಯೇಶಾ ವೆರಾಲ್ ಅವರು ತಿಳಿಸಿದ್ದಾರೆ, ಅಷ್ಟೇ ಅಲ್ಲದೇ ತಂಬಾಕು ದೇಶದಲ್ಲಿ ಪ್ರತಿ ವರ್ಷವು ಸುಮಾರು 4,500 ರಿಂದ 5,000 ಜನರನ್ನು ಕೊಲ್ಲುತ್ತದೆ. * ಇದೀಗ ನ್ಯೂಜಿಲೆಂಡ್ 'ಸ್ಮೋಕ್ ಫ್ರೀ (Smokefree)ಅಯೋಟೆರೋಡ್ನ(Aotearoa) 2025 ಆಕ್ಷನ್ ಪ್ಲಾನ್' ಎಂಬ ಯೋಜನೆಯು ಮೂಲಕ ಹೊಗೆಯಾಡುವ ತಂಬಾಕು ಉತ್ಪನ್ನಗಳ ಲಭ್ಯತೆ, ವ್ಯಸನ ಮತ್ತು ಆಕರ್ಷಣೆಯನ್ನು ಕಡಿಮೆ ಮಾಡಲು ನಿಯೋಜಿಸಿದೆ. * ಯುಎಸ್ನಲ್ಲಿ ತಂಬಾಕು ಉತ್ಪನ್ನಗಳನ್ನು ಖರೀದಿಸಲು ಫೆಡರಲ್ ಕನಿಷ್ಠ ವಯಸ್ಸ 18 ರಿಂದ 21 ಕ್ಕೆ ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.