Job Description: * ಇತ್ತೀಚಿಗೆ ನಾಸಾ ತರಬೇತಿ ಗಗನಯಾತ್ರಿಗಳ 10 ಹೆಸರುಗಳನ್ನು ಘೋಷಿಸಿದೆ, ಅದರಲ್ಲಿ ಭಾರತೀಯ ಮೂಲದ ಅನಿಲ್ ಮೆನನ್ ಅವರ ಹೆಸರು ಕೂಡ ಪ್ರಕಟವಾಗಿದೆ. * ಅನಿಲ್ ಮೆನನ್ ಅವರು ಅಮೇರಿಕ ವಾಯುಪಡೆಯ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ, ಆಯ್ಕೆಯಾಗಿರುವ ತರಬೇತಿ ಗಗನಯಾತ್ರಿಗಳ ಪೈಕಿ ಇವರು ಒಬ್ಬರಾಗಿದ್ದಾರೆ. * ನಾಸಾದ ಗಗನಯಾತ್ರಿಗಳ ತರಬೇತಿಗೆ 12,000 ಕ್ಕೂ ಅಧಿಕ ಅರ್ಜಿದಾರರು ಅರ್ಜಿಯನ್ನು ಸಲ್ಲಿಸಿದ್ದರು ಅದರಲ್ಲಿ 10 ಗಗನಯಾತ್ರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರ ಹೆಸರನ್ನು ಘೋಷಣೆ ಮಾಡಿದೆ. * ಅನಿಲ್ ಮೆನನ್ ಅವರು 2014 ರಲ್ಲಿ ನಾಸಾ ಫ್ಲೈಟ್ ಸರ್ಜನ್ ಆಗಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದಾರೆ, ಇವರು ಉಕ್ರೇನಿಯನ್ ಮತ್ತು ಭಾರತೀಯ ವಲಸಿಗರಿಗೆ ಜನಿಸಿದವರಾಗಿದ್ದಾರೆ. * ಮತ್ತೇ ಇವರು 2018 ರಲ್ಲಿ 'ಸ್ಪೇಸ್ ಎಕ್ಸ್'ಗೆ ಸೇರ್ಪಡೆಯಾದರು ಅಲ್ಲಿಯೂ ಕೂಡ ವಿಮಾನ ಸರ್ಜನ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.