Job Description: * ಅಸ್ಸಾಂನ ಕವಯಿತ್ರಿ ನೀಲ್ಮಣಿ ಫುಕನ್ ಅವರಿಗೆ 56ನೇ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ, ಇದು ಭಾರತ ದೇಶದ ಶ್ರೇಷ್ಠ ಪ್ರಶಸ್ತಿಯಾಗಿದೆ. * ಈ ಹಿಂದೆ 1933 ರಲ್ಲಿ ನೀಲ್ಮಣಿ ಫುಕಾನ್ ಅವರು ಅಸ್ಸಾಂನ ದೇರ್ಗಾಂವ್ನಲ್ಲಿ ಜನಿಸಿದ್ದಾರೆ, ಇವರಿಗೆ 1981 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ, ಹಾಗೂ 1990 ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು, ಮತ್ತೇ ಇವರಿಗೆ 1997 ರಲ್ಲಿ ಅಸ್ಸಾಂ ವ್ಯಾಲಿ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು, ಇದಾದ ಬಳಿಕ ಮತ್ತೇ ಇವರು 2002 ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಪಡೆದುಕೊಂಡರು. * ಕೊಂಕಣಿ ಭಾಷೆಯ ಸಣ್ಣಕಥೆಗಾರ ಹಾಗೂ ಕಾದಂಬರಿಕಾರ ದಾಮೋದರ್ ಮೌಜೊ ಅವರ ಭಾರತೀಯ ಸಾಹಿತ್ಯಕ್ಕೆ ನೀಡಿದ ಅಪಾರವಾದ ಕೊಡುಗೆಗಳನ್ನೂ ಪರಿಗಣಿಸಿ ಇವರಿಗೆ 57 ನೇ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ. * ದಾಮೋದರ್ ಮೌಜೊ ಅವರು ಗೋವಾದಲ್ಲಿ ಜನಿಸಿದ್ದಾರೆ, ಇವರು ಸಣ್ಣ ಕಥೆಗಳ ವಿಮರ್ಶಕರು ಹಾಗೂ ಚಿತ್ರಕಥೆಗಾರರಾಗಿದ್ದಾರೆ, ಇವರಿಗೆ 1983 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. * ದಾಮೋದರ್ ಮೌಜೊ ಅವರು: ಸುನಾಮಿ ಸೈಮನ್, ಕಾರ್ಮೆಲಿನ್, ಭುರ್ಗಿಂ ಮ್ಹುಗೆಲಿಂ ತಿಂ ಹೀಗೆ ಹಲವು ಕೃತಿಗಳುನ್ನು ರಚಿಸಿದ್ದಾರೆ.