Job Description: * ಪ್ರಸ್ತುತ ಭಾರತವು ದೇಶಿಯವಾಗಿ ಅಭಿವೃದ್ಧಿಪಡಿಸಿರುವ, ಲಂಬವಾಗಿ ಭೂಮಿಯಿಂದ ಆಕಾಶದೆಡೆಗೆ ಉಡಾವಣೆ ಮಾಡಬಹುದಾದ ನೂತನ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. * ಪ್ರಸ್ತುತ ಒಡಿಶಾದ ಕರಾವಳಿ ಭಾಗದ ಚಾಂಡಿಪುರ್ನಲ್ಲಿ ಈ ಕ್ಷಿಪಣಿಯ ಪರೀಕ್ಷೆಯನ್ನು ನಡೆಸಲಾಯಿತು, ಹಾಗೂ ಈ ಕ್ಷಿಪಣಿಯನ್ನು ನೌಕಾಪಡೆಗಾಗಿ ಅಭಿವೃದ್ಧಿಪಡಿಸಲಾಗಿದೆ, ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮಾಹಿತಿ ನೀಡಿದೆ. * ಈ ಕ್ಷಿಪಣಿಯ ಸರಿ ಸುಮಾರು 50 ಕಿ.ಮೀ ವರೆಗೆ ತನ್ನ ಕಾರ್ಯವ್ಯಾಪ್ತಿ ಹೊಂದಿದೆ ಎಂದು DRDO ತಿಳಿಸಿದೆ. * ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗದ ಹಿನ್ನೆಲೆಯಿಂದಾಗಿ ಒಡಿಶಾದ ಬಾಲಾಸೋರ್ ಜಿಲ್ಲಾಡಳಿತವು ಕ್ಷಿಪಣಿ ಉಡಾವಣೆ ಸ್ಥಳದಿಂದ 2.5 ಕಿ.ಮೀ ವ್ಯಾಪ್ತಿಯಲ್ಲಿನ ಸರಿ ಸುಮಾರು 4500 ಜನರನ್ನು ಸ್ಥಳಾಂತರಿಸಿದೆ, DRDO ದ ಈ ಎಲ್ಲ ಮುಂದಾಲೋಚನೆ ಕಾರ್ಯಗಳಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು DRDO ಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.