Job Description: * ಪ್ರತಿ ವರ್ಷವು ಡಿಸೆಂಬರ್. 05 ರಂದು ವಿಶ್ವ ಮಣ್ಣಿನ ದಿನವನ್ನು ಆಚರಣೆ ಮಾಡಲಾಗುತ್ತದೆ. * ಪ್ರಸ್ತುತ ಆಹಾರ ಮತ್ತು ಕೃಷಿ ಸಂಸ್ಥೆ (FAO) ಹಾಗೂ ಹಲವಾರು ಇತರ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ದಿನವನ್ನು ಆಚರಣೆ ಮಾಡಲಾಗುತ್ತದೆ. * ವಿಶ್ವ ಮಣ್ಣಿನ ದಿನವನ್ನು ಮಣ್ಣಿನ ಲವಣಾಂಶವನ್ನು ನಿಲ್ಲಿಸಿ, ಮಣ್ಣಿನ ಉತ್ಪಾದನೆಯನ್ನು ಹೆಚ್ಚಿಸಿ ಎಂಬ ಧ್ಯೆಯವ್ಯಾಕ್ಯದ ಅಡಿಯಲ್ಲಿ ಆಚರಿಸಲಾಗಿದೆ. * ಭೂಮಿಯ ಜೀವವೈವಿಧ್ಯದ 4 ನೇ ಒಂದು ಭಾಗಕ್ಕೆ ಮಣ್ಣು. ಇದೀಗ ಮಣ್ಣಿನ ಮಾಲಿನ್ಯ ಹಾಗೂ ಕೆಟ್ಟ ಮಣ್ಣಿನಿಂದಾಗಿ ನೆಲದ ಕೆಳಗಿನ ಸೂಕ್ಷ್ಮ ಜೀವಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದರಿಂದಾಗಿ ಸೂಕ್ಷ್ಮಜೀವಿಗಳು ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ಕೆಲಸ ಮಾಡುತ್ತಿವೆ, ಹಾಗೂ ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಸಾರಜನಕವನ್ನು ಒದಗಿಸಲು ಸಹಾಯ ಮಾಡುತ್ತವೆ. * ವಿಶ್ವ ಮಣ್ಣಿನ ದಿನವನ್ನು ಡಿಸೆಂಬರ್. 05 ರಂದು ಆಚರಿಸಲು ಇಂಟರ್ನ್ಯಾಷನಲ್ ಯೂನಿಯನ್ ಆಫ್ ಸೋಲ್ ಸೈನ್ಸಸ್ ಶಿಫಾರಸ್ತು ಮಾಡಿದೆ, ಅಷ್ಟೇ ಅಲ್ಲದೇ ಥೈಲ್ಯಾಂಡ್ ನಾಯಕತ್ವದಲ್ಲಿ, FAO ವಿಶ್ವ ಮಣ್ಣಿನ ದಿನದ ಸ್ಥಾಪನೆಗೆ ಬೆಂಬಲವನ್ನು ನೀಡಿದೆ. * ಈ ಹಿಂದೆ 2014 ರಲ್ಲಿ ಮೊದಲ ವಿಶ್ವ ಮಣ್ಣಿನ ದಿನವನ್ನು ಆಚರಣೆ ಮಾಡಲಾಯಿತು. * ಡಿಸೆಂಬರ್. 05 ರಂದು ಥೈಲ್ಯಾಂಡ್ನ ದಿವಂಗತ ರಾಜ ಭೂಮಿಬೋಲ್ ಅದುಲ್ಯದೇಜ್ ಅವರ ಜನ್ಮದಿನದ ಹಿನ್ನಲೆಯಿಂದಾಗಿ ಆಚರಿಸಲಾಗುತ್ತದೆ.