Job Description: * ಆಂಗ್ ಸಾನ್ ಸೂಕಿ ಮಯನ್ಮಾರ್ ರಾಜಕಾರಣಿಯಾಗಿದ್ದಾರೆ, ಇವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಆದರೆ ಇದೀಗ ಅಂದರೆ 2021 ರ ಡಿಸೆಂಬರ್. 06 ರಂದು ಕರೋನಾ ವೈರಸ್ ನಿರ್ಬಂಧಗಳನ್ನು ಉಲ್ಲಂಘಣೆ ಮಾಡಿದ್ದಕ್ಕಾಗಿ ಮ್ಯಾನ್ಮಾರ್ ವಿಶೇಷ ನ್ಯಾಯಾಲಯವು 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. * ಈ ಹಿಂದೆ 2016 ಮತ್ತು 2021 ರ ಮಧ್ಯೆ ಆಂಗ್ ಸಾನ್ ಸೂಕಿ ಅವರು ಮ್ಯಾನ್ಮಾರ್ನ ರಾಜ್ಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ, ಈ ಹುದ್ದೆಯು ಆ ದೇಶದಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ಸಮಾನವಾಗಿದೆ. * ಪ್ರಸ್ತುತ ಆಂಗ್ ಸಾನ್ ಸೂಕಿ ಅವರು ಆಂಗ್ ಸಾನ್ ನ ಕಿರಿಯ ಮಗಳಾಗಿದ್ದಾಳೆ, ಈ ಆಂಗ್ ಸಾನ್ ಅವರು ಮ್ಯಾನ್ಮಾರ್ ನ ಪಿತಾಮಹರಾಗಿದ್ದಾರೆ, ಈ ಹಿಂದೆ1989 ರಲ್ಲಿ ಚುನಾವಣೆಗೆ ಮೊದಲೇ ಇವಳನ್ನು ಬಂಧಿಸಲಾಗಿತ್ತು ಸುಮಾರು 15 ವರ್ಷಗಳ ವರೆಗೆ ಈಕೆಯನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು, ಅಷ್ಟೇ ಅಲ್ಲದೇ ಇವಳನ್ನು 'ಗಾಂಧಿಯ ಮಗಳು' ಎಂದು ಕರೆಯಲಾಗುತ್ತಿತ್ತು. * ಪ್ರಸ್ತುತ ಆಂಗ್ ಸಾನ್ ಸೂಕಿ ಅವರು 8888 ದಂಗೆಯ ಮೂಲಕ ಪ್ರಖ್ಯಾತಿಯನ್ನು ಪಡೆದಿದ್ದರು, ಈ 8888 ರ ದಂಗೆಯನ್ನು 'ಪೀಪಲ್ ಪವರ್ ದಂಗೆ' ಎಂದು ಕರೆಯಲಾಗುತ್ತದೆ. * ಆಂಗ್ ಸಾನ್ ಸೂಕಿ ಅವರು ಮ್ಯಾನ್ಮಾರ್ ಮಿಲಿಟರಿಯ ವಿರುದ್ಧ ದಂಗೆ ಏಳಲು ಸಾರ್ವಜನಿಕರನ್ನು ಪ್ರಚೋದಿಸುತ್ತಿದ್ದಾರೆ, ಹಾಗೂ COVID1-19 ಪ್ರೋಟೋಕಾಲ್ಗಳನ್ನು ಉಲ್ಲಂಘಿಸಿದ್ದಾರೆ ಎಂಬ ಎರಡು ಆರೋಪಗಳಿಗಾಗಿ ಜೈಲು ಶಿಕ್ಷೆ ವಿಧಿಸಲಾಗಿದೆ. * ಮ್ಯಾನ್ಮಾರ್ ದೇಶವು 1948 ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ, ಮ್ಯಾನ್ಮಾರ್ನ ಮಿಲಿಟರಿ 3 ನೇ ಬಾರಿಗೆ ತುರ್ತು ಪರಿಸ್ಥಿತಿಯ ಅಧಿಕಾರವನ್ನು ವಹಿಸಿಕೊಂಡಿದೆ.