Job Description: * ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೈತ್ರಿ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಡಿಸೆಂಬರ್. 06 ನ್ನು 'ಮೈತ್ರಿ ದಿನ' ಎಂದು ಆಚರಣೆ ಮಾಡಲು ನಿರ್ಧರಿಸಲಾಗಿದೆ, ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. * ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಆಗಿನ ಸರ್ಕಾರವು 1971 ರ ಡಿಸೆಂಬರ್. 06 ರಂದು ಢಾಕಾವನ್ನು ಬಾಂಗ್ಲಾದೇಶದ ರಾಜಧಾನಿ ಎಂಬ ಮಾನ್ಯತೆ ನೀಡಿತ್ತು, ಇದರ ಸ್ಮರಣೆಯನ್ನು ಶಾಶ್ವತವಾಗಿ ನೆನಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯವು ಮಾಹಿತಿಯನ್ನು ನೀಡಿದೆ. * ಪ್ರಸ್ತುತ ದೆಹಲಿಯಲ್ಲಿರುವ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ಕಾರ್ಯಕ್ರಮದಲ್ಲಿ ಎರಡೂ ರಾಷ್ಟ್ರಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. * ಈ ಹಿಂದೆ 1971 ರಲ್ಲಿ ಭಾಂಗ್ಲಾದೇಶಕ್ಕೆ ಸ್ವಾತಂತ್ರ್ಯಸಿಗಲು ಭಾರತ ದೇಶವು ಪ್ರಮುಖ ಕಾರಣವಾಗಿದೆ, ಹಾಗೂ ಇದೇ ಡಿಸೆಂಬರ್. 06 ಕ್ಕೆ ಈ ಸಂಭ್ರಮಕ್ಕೆ 50 ವರ್ಷ ಪೂರ್ಣಗೊಂಡಂತಾಯಿತ್ತು ಎಂದಿದ್ದಾರೆ. * ಈ ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ ಇದೇ ಡಿ.14 ರಿಂದ 16 ರವರೆಗೆ ದೆಹಲಿಯ ಇಂಡಿಯಾ ಗೇಟ್ ನ ಬಳಿ ಕಾರ್ಯಕ್ರಮಗಳು ಜರುಗಲಿವೆ ಹಾಗೂ ಆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರಿಂದ ಚಾಲನೆ ಸಿಗಲಿದೆ ಎನ್ನಲಾಗಿದೆ.