Job Description: * ಇದೇ ಡಿ.06 ರಂದು ಭಾರತ-ರಷ್ಯಾ ರಾಷ್ಟ್ರಗಳ ನಡುವಿನ 21 ನೇ ವಾರ್ಷಿಕ ಶೃಂಗಸಭೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಡುವೆ ದ್ವಿಪಕ್ಷೀಯ ಬಗೆಗಿನ ಮಾತುಕತೆ ನಡೆದವು. * ಈ 21 ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯ ದೆಹಲಿಯ ಹೈದರಾಬಾದ್ ಹೌಸ್'ನಲ್ಲಿ ಜರುಗಿದೆ, ಈ ಹಿಂದೆ 2019 ರಲ್ಲಿ ಮೋದಿ-ಪುಟಿನ್ ಅವರು ಬ್ರಿಕ್ಸ್ ಶೃಂಗಸಭೆಯ ಪಾರ್ಶ್ವದಲ್ಲಿ ಭೇಟಿಯಾಗಿದ್ದರು. * ಈ ದ್ವಿಪಕ್ಷೀಯ ಶೃಂಗಸಭೆಯ ಮುಂಚಿತವಾಗಿ 2+2 ಸಚಿವರ ದ್ವಿಪಕ್ಷೀಯ ಸಭೆ ಜರುಗಿದೆ, ಅಷ್ಟೇ ಅಲ್ಲದೇ ಈ 21 ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾರತಕ್ಕೆ ಎಕೆ-203 ಅಸಾಲ್ಟ್ ರೈಫಲ್ ಗಳ ತಯಾರಿಕೆ ಹಾಗೂ ಪೂರೈಕೆಗೆ ಉಭಯ ರಾಷ್ಟ್ರಗಳು ಒಪ್ಪಿಕೊಂಡು ಸಹಿ ಹಾಕಿವೆ.