Job Description: * ಪ್ರಸ್ತುತ ಭಾರತದಲ್ಲಿ ಒಟ್ಟಾರೆ 17,726 ನೋಂದಾಯಿತ ಪೈಲಟ್ಗಳಿದ್ದಾರೆ, ಅವರಲ್ಲಿ 2,764 ಮಹಿಳಾ ಪೈಲಟ್ಗಳಿದ್ದಾರೆ ಎಂದು ಸಹಾಯಕ ವಾಯುಯಾನ ಸಚಿವ ವಿ.ಕೆ,ಸಿಂಗ್ ಅವರು ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ, ಅಷ್ಟೇ ಅಲ್ಲದೇ ವಿಶ್ವದಲ್ಲಿಯೇ ಹೆಚ್ಚು ಶೇಕಡಾವಾರು ಮಹಿಳಾ ಪೈಲಟ್ ಗಳು ಭಾರತದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. * ಇದೀಗ ಇಂಟರ್ನ್ಯಾಷನಲ್ ಸೊಸೈಟಿ ಆಫ್ ವಿಮೆನ್ ಏರ್ಲೈನ್ ಪೈಲಟ್ಸ್ ನೀಡಿರುವ ಮಾಹಿತಿಯ ಪ್ರಕಾರ ವಿಶ್ವದಲ್ಲಿ ಸರಿ ಸುಮಾರು ಶೇ. 5 ರಷ್ಟು ಮಹಿಳಾ ಪೈಲಟ್ ಗಳಿದ್ದಾರೆ. * ಭಾರತದಲ್ಲಿ ಮಹಿಳಾ ಪೈಲಟ್ಗಳ ಪ್ರಮಾಣವು ಶೇ.15 ಕ್ಕೂ ಹೆಚ್ಚಿದೆ, ಪ್ರಸ್ತುತ ಭಾರತದಲ್ಲಿನ ಮಹಿಳಾ ಪೈಲಟ್ಗಳ ಶೇ. ಪ್ರಮಾಣವು ಅಮೇರಿಕ ಹಾಗೂ ಆಸ್ಟ್ರೇಲಿಯಾ ರಾಷ್ಟಗಳಿಗಿಂತ ಹೆಚ್ಚಿದೆ ಎಂದು ತಿಳಿಸಿದ್ದಾರೆ. * ಇದೀಗ ನಾಗರಿಕ ವಾಯುಯಾನ ಸಚಿವಾಲಯವು ತನ್ನ ಸಹವರ್ತಿ ಸಂಸ್ಥೆಗಳ ಸಹಯೋಗದಲ್ಲಿ ದೇಶದಲ್ಲಿನ ಪೈಲಟ್ ತರಬೇತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ನಾಗರಿಕ ವಾಯುಯಾನ ಸಚಿವಾಲಯ ವರದಿ ಮಾಡಿದೆ.