Job Description: * ಇತ್ತೀಚಿಗೆ ನಡೆದ ಬಾಂಗ್ಲಾದೇಶ ಇಂಟರ್ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಭಿಷೇಕ್ ಸೈನಿ ಅವರು ಪ್ರಶಸ್ತಿ ಜಯಿಸಿದ್ದಾರೆ. * ಅಭಿಷೇಕ್ ಸೈನಿ ಅವರು ಫೈನಲ್ ಪಂದ್ಯದಲ್ಲಿ 21-15 ಹಾಗೂ 21-18 ಅಂತರದಿಂದ ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಋತ್ವಿಕ್ ಸಂಜೀವಿ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಜಯಿಸಿದ್ದಾರೆ. * ಇದೇ ಬಾಂಗ್ಲಾದೇಶ ಇಂಟರ್ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಡಬಲ್ಸ್ನ ವಿಭಾಗದಲ್ಲಿ ಭಾರತದ ಮೆಹರೀನ್ ರಿಜಾ ಹಾಗೂ ಆರತಿ ಸಾರಾ ಸುನಿಲ್ ಅವರು ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ, ಇವರು ಫೈನಲ್ ಹಂತದಲ್ಲಿ 22-20, ಹಾಗೂ 21-12 ರ ಅಂತರದಿಂದ ಮಲೇಷ್ಯಾದ ಕಸ್ತೂರಿ ರಾಧಾಕೃಷ್ಣನ್ ಹಾಗೂ ವೆನೋಶಾ ರಾಧಾಕೃಷ್ಣ ಅವರಿಗೆ ಸೋಲಿನ ರುಚಿಯನ್ನು ತೋರಿಸಿದ್ದಾರೆ.