Job Description: * ಪ್ರಸ್ತುತ ಭಾರತ ದೇಶವು 2022 ರ ಮಾರ್ಚ್ 4 ಹಾಗೂ 5 ರಂದು ನಡೆಯಲಿರುವ ಡೆನ್ಮಾರ್ಕ್ ಎದುರಿನ ಡೇವಿಸ್ ಕಪ್ ವಿಶ್ವಗುಂಪು ಒಂದರ ಪಂದ್ಯಕ್ಕೆ ಆತಿಥ್ಯ ವಹಿಸಿಕೊಳ್ಳಲಿದೆ, ಈ ಹಿಂದೆ 2019 ರ ಫೆಬ್ರುವರಿ ಬಳಿಕ ದೇಶವು ಮೊದಲ ಬಾರಿ ಡೇವಿಸ್ ಕಪ್ ಪಂದ್ಯಆಯೋಜಿಸುತ್ತಿದೆ ಎಂದು ತಿಳಿದು ಬಂದಿದೆ. * ಈ ಹಿಂದೆ ಭಾರತವು ಕಳೆದ ಮೂರು ಪಂದ್ಯಗಳನ್ನು ಆಡಲು 2021 ರಲ್ಲಿ ಫಿನ್ಲೆಂಡ್, 2020 ರಲ್ಲಿ ಕ್ರೊವೇಷ್ಯಾ, ಹಾಗೂ 2019 ರಲ್ಲಿ ಕಜಕಸ್ತಾನ ದೇಶಗಳಿಗೆ ಪ್ರಯಾಣ ಬೆಳೆಸಿತ್ತು, ಆದರೆ ಇದೀಗ 2022 ರ ಮಾರ್ಚ್'ನಲ್ಲಿ ಭಾರತದಲ್ಲೆಯೇ ನಡೆಯಲಿದೆ ಎಂದಿದ್ದಾರೆ. * ಈ ಹಿಂದೆ ಭಾರತವು 2019 ರ ಫೆಬ್ರುವರಿಯಲ್ಲಿ ಇಟಲಿ ತಂಡಕ್ಕೆ ಆತಿಥ್ಯ ವಹಿಸಿತ್ತು, ಆದರೆ ಆ ಪಂದ್ಯದಲ್ಲಿ ಭಾರತವು 1-3 ರ ಅಂತರದಿಂದ ಸೋಲ ಅನುಭವಿಸಿತ್ತು. * ಇಟಲಿ ಹಾಗೂ ಭಾರತ ತಂಡಗಳ ಹಣಾಹಣಿಯು ಭಾರತದ ಕೋಲ್ಕತ್ತ ನಗರದಲ್ಲಿ ಜರುಗಿತ್ತು. * ಈ ಹಿಂದೆ ಭಾರತವು 1984 ರ ಸೆಪ್ಟೆಂಬರ್ ಆರ್ಹಸ್ನಲ್ಲಿ 3-2ರಿಂದ ಗೆಲುವು ಸಾಧಿಸಿತ್ತು, ಇದಾದ ಬಳಿಕ ಭಾರತ ಮತ್ತು ಡೆನ್ಮಾರ್ಕ್ ಎರಡು ರಾಷ್ಟ್ರಗಳ ಮಧ್ಯೆ ನಡೆಯಲಿರುವ ಮೊದಲ ಪಂದ್ಯ ಇದಾಗಲಿದೆ ಎಂದಿದ್ದಾರೆ.