Job Description: * ಪ್ರಸ್ತುತ ಬೆಂಗಳೂರು ನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿನ ಬಡವರ ಸಂಖ್ಯೆ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಎಂದು ನೀತಿ ಆಯೋಗ ಪ್ರಕಟಿಸಿರುವ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕದ ವರದಿ ಮೂಲಕ ತಿಳಿದು ಬಂದಿದೆ. * ನೀತಿ ಆಯೋಗ ಪ್ರಕಟಿಸಿರುವ ವರದಿಯ ಪ್ರಕಾರ ಕರ್ನಾಟಕ ರಾಜ್ಯದ ದಕ್ಷಿಣ ಜಿಲ್ಲೆಗಳು ಅಭಿವೃದ್ಧಿ ಸೂಚಕಗಳಲ್ಲಿ ಉತ್ತಮವಾಗಿವೆ ಎಂದು ತಿಳಿಸಲಾಗಿದೆ. * ಈ ಬಡತನ ಸೂಚ್ಯಂಕವು ಆರೋಗ್ಯ, ಶಿಕ್ಷಣ ಹಾಗೂ ಅಲ್ಲಿನ ಜೀವನ ಮಟ್ಟಗಳನ್ನು ಒಳಗೊಂಡಿದೆ, ಇದಷ್ಟೇ ಅಲ್ಲದೇ ಆರೋಗ್ಯದ ಆಯಾಮಗಳು, ಪೌಷ್ಟಿಕಾಂಶದ ಶಿಕ್ಷಣ ಸೂಚಕಗಳು, ಮಗು ಮತ್ತು ವಯಸ್ಕರ ಮರಣ, ತಾಯಿಯ ಆರೈಕೆ, ಶಾಲಾ ವರ್ಷಗಳು, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು , ವಿದ್ಯುತ್, ವಸತಿ, ಬ್ಯಾಂಕ್ ಖಾತೆಗಳು ಈ ಎಲ್ಲವನ್ನು ಒಳಗೊಂಡಿದೆ. * ಈ ಎಲ್ಲ ವರದಿಯ ಪ್ರಕಾರ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಜನಸಂಖ್ಯೆಯಲ್ಲಿ ಕೇವಲ 6.62% ಜನರು ಬಹುಆಯಾಮದ ಬಡತನ ರೇಖೆಗಿಂತ ಕೆಳಗಿದ್ದಾರೆ. * ಹಾಸನ ಜಿಲ್ಲೆಯು 3 ನೇ ಸ್ಥಾನದಲ್ಲಿದೆ, ಶೇ. 6.64 ರಷ್ಟು ಜನಸಂಖ್ಯೆಯು ಬಹುಆಯಾಮದ ಬಡತನ ಮಟ್ಟಕ್ಕಿಂತ ಕೆಳಗಿದೆ. * ಮೈಸೂರು ಜಿಲ್ಲೆಯು 5 ನೇ ಸ್ಥಾನದಲ್ಲಿದೆ, ಶೇ.7.8 ರಷ್ಟು ಬಡತನವನ್ನು ಹೊಂದಿದೆ, ಕೊಡಗು ಜಿಲ್ಲೆ ಶೇ. 8.7 ರಷ್ಟು ಬಡತನ, ಚಿಕ್ಕಮಗಳೂರು ಶೇ. 11.2 ರಷ್ಟು ಬಡತನ, ಶಿವಮೊಗ್ಗ ಶೇ. 12.7 ರಷ್ಟು ಬಡತನ, ಹಾಗೂ ಚಾಮರಾಜನಗರ ಜಿಲ್ಲೆಯು ಶೇ. 18.2 ರಷ್ಟು ಜನಸಂಖ್ಯೆಯು ಬಡತನ ಮಟ್ಟಕ್ಕಿಂತ ಕೆಳಗಿದೆ.