Job Description: * ಇತ್ತೀಚಿಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ 2 ನೇ ಟೆಸ್ಟ್ ಪಂದ್ಯವು ಜರುಗಿತ್ತು, ಆ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡದ ವಿರುದ್ಧ 1-0 ಅಂತರದಲ್ಲಿ ಸರಣಿಯನ್ನು ಭರ್ಜರಿ ಜಯ ಸಾಧಿಸಿದೆ, ಹಾಗೂ ಟೆಸ್ಟ್ ರ್ಯಾಂಕಿಂಗ್'ನಲ್ಲಿ ಭಾರತ ತಂಡವು ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. * ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ 2 ನೇ ಟೆಸ್ಟ್ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದೆ, ಪ್ರಸ್ತುತ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 372 ರನ್ಗಳ ಗೆಲುವು ದಾಖಲಿಸಿದೆ. * ಇದೀಗ ICC ಟೆಸ್ಟ್ ರ್ಯಾಂಕಿಂಗ್'ನಲ್ಲಿ ಭಾರತ ತಂಡವು 124 ರೇಟಿಂಗ್ಸ್ ಪಡೆದು ಅಗ್ರಸ್ಥಾನವನ್ನು ಪಡೆದಿದೆ, ಹಾಗೂ ನ್ಯೂಜಿಲೆಂಡ್ ತಂಡವು 2 ನೇ ಸ್ಥಾನವನ್ನು ಪಡೆದಿದೆ. * ಈ ಹಿಂದೆ ಜೂನ್ ತಿಂಗಳಿನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್'ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ ತಂಡವು ಸೋಲನುಭವಿಸಿತ್ತು.