Job Description: * ಪ್ರಸ್ತುತ ಕೇಂದ್ರ ಸರ್ಕಾರವು ಉತ್ತರ ಪ್ರದೇಶ ರಾಜ್ಯದ ಅಮೇಥಿಯ ಕೊರ್ವಾದಲ್ಲಿ 5 ಲಕ್ಷಕ್ಕೂ ಅಧಿಕ ಎಕೆ-203 ರೈಫಲ್ಗಳನ್ನು ಉತ್ಪಾದಿಸುವ ಯೋಜನೆಗೆ ಅನುಮೋದನೆ ನೀಡಿದೆ, ಈ ಯೋಜನೆಯು ರಕ್ಷಣಾ ಸಾಮಗ್ರಿಗಳ ಅಭಿವೃದಿಪಡಿಸುವಲ್ಲಿ ಸ್ವಾವಲಂಬನೆಯನ್ನು ತೋರಲು ಕೈಗೊಂಡಿರುವ ನಿರ್ಧಾರವಾಗಿದೆ. * ಈ ಯೋಜನೆಯಿಂದಾಗಿ ಉತ್ತರ ಪ್ರದೇಶ ರಾಜ್ಯವು ಭಾರತದ ರಕ್ಷಣಾ ಉತ್ಪಾದನಾ ಕೇಂದ್ರವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ, ಅಷ್ಟೇ ಅಲ್ಲದೇ ಈ ಯೋಜನೆಯಿಂದಾಗಿ ಅಲ್ಲಿನ ಸ್ಥಳೀಯರಿಗೆ ಹೊಸ ಉದ್ಯೋಗ'ಗಳನ್ನೂ ಸೃಷ್ಟಿಸಲಿದೆ, ಹಾಗೂ ಕಚ್ಚಾ ವಸ್ತುಗಳ ಪೂರೈಕೆಗಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (MSME)ಗಳಿಗೆ ಅವಕಾಶವನ್ನು ಕಲ್ಪಿಸಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಕೇಂದ್ರ ರಕ್ಷಣಾ ವಲಯದಲ್ಲಿ ಈ ಯೋಜನೆಯುನ್ನು ರಷ್ಯಾ ರಾಷ್ಟ್ರದ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತಿದೆ. * ಸರಿ ಸುಮಾರು '3' ದಶಕಗಳ ಹಿಂದೆ ಭಾರತೀಯ ಸೇನೆಗೆ ಸೇರಿರುವ "ಇನ್ಸಾಸ್' ರೈಫಲ್ಗಳ ಸ್ಥಾನ"ವನ್ನು ಈ ಎಕೆ-203 ರೈಫಲ್ಗಳು ವಹಿಸಿಕೊಳ್ಳಲಿವೆ, ಈ ಎಕೆ-203 ರೈಫಲ್ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರಲಿವೆ, ಹಾಗೂ ಸುಮಾರು 300 ಮೀ. ದೂರದವರೆಗಿನ ಗುರಿಯನ್ನು ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿರಲಿವೆ ಎಂದು ತಿಳಿಸಲಾಗಿದೆ.