Job Description: * ಪ್ರಸ್ತುತ ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟ್ ಪಟುವಾಗಿದ್ದ ಐಲೀನ್ ಆಶ್ ಅವರು ತಮ್ಮ 110 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ, ಈ ಮಾಹಿತಿಯನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ವರದಿ ಮಾಡಿದೆ. * ಐಲೀನ್ ಆಶ್ ಒಬ್ಬ ಇಂಗ್ಲೆಂಡ್ ಕ್ರಿಕೆಟಿಗ ಮತ್ತು ಸೂಪರ್ ಸೆಂಟೆನರಿಯನ್ ಆಗಿದ್ದರು, ಇವರು ಬಲಗೈ ಮಧ್ಯಮ ಬೌಲರ್ ಆಗಿದ್ದರು, ಹಾಗೂ ಇವರು 1937 ಮತ್ತು 1949 ರ ಮಧ್ಯೆ ಇಂಗ್ಲೆಂಡ್ ತಂಡಕ್ಕಾಗಿ '7' ಟೆಸ್ಟ್ ಪಂದ್ಯಗಳಲ್ಲಿ ಆಟವಾಡಿದ್ದಾರೆ, ಅಷ್ಟೇ ಅಲ್ಲದೇ ಇವರು ದೀರ್ಘಾವಧಿಯ ಅಂತರರಾಷ್ಟ್ರೀಯ ಕ್ರಿಕೆಟಿಗರಾಗಿದ್ದಾರೆ. * ಹಿರಿಯ ಟೆಸ್ಟ್ ಕ್ರಿಕೆಟ್ ಪಟು ಐಲೀನ್ ಆಯಷ್ ಅವರು ಬಲಗೈ ವೇಗದ ಬೌಲರ್ ಅಗಿ ಅದೆಷ್ಟು ಪಂದ್ಯಗಳನ್ನು ಆಡಿದ್ದಾರೆ, ಈ ಹಿಂದೆ 1937 ರಲ್ಲಿ ಐಲೀನ್ ಆಯಷ್ ಅವರು ಆಸ್ಟ್ರೇಲಿಯಾ ತಂಡದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಲು ಆರಂಭಿಸಿದ್ದರು. * ಈ ಹಿರಿಯ ಟೆಸ್ಟ್ ಕ್ರಿಕೆಟ್ ಪಟು ಐಲೀನ್ ಆಯಷ್ ಅವರು 1949 ರಲ್ಲಿ ನಿವೃತ್ತಿಯನ್ನು ಪಡೆದರು.