Job Description: * ಇತ್ತೀಚಿಗೆ ಭಾರತೀಯ ಸೇನೆಯು ನಾಗಲ್ಯಾಂಡ್ ನ ಮೊನ್ ಜಿಲ್ಲೆಯಲ್ಲಿನ ನಾಗರಿಕರನ್ನು ಉಗ್ರರೆಂದು ಭಾವಿಸಿ ಹತ್ಯೆ ಮಾಡಿದೆ, ಇದೀಗ ಆ ಹೊಣೆಯನ್ನು ಭಾರತೀಯ ಸೇನೆ ಹೊತ್ತುಕೊಂಡಿದೆ, ಹಾಗೂ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ ಮತ್ತು ನ್ಯಾಯ ಒದಗಿಸಿಕೊಡುವ ಭರವಸೆಯನ್ನು ನೀಡಿದೆ. * ಪ್ರಸ್ತುತ ಭಾರತೀಯ ಸೇನೆಯು ಗುಪ್ತಚರ ಇಲಾಖೆಯಿಂದ ದಂಗೆಕೋರರ ಚಲನವಲನದ ಖಚಿತ ಮಾಹಿತಿಯನ್ನು ಪಡೆದುಕೊಂಡ ನಂತರ ನಾಗಲ್ಯಾಂಡ್ ನ ತಿರು, ಮೊನ್ ಜಿಲ್ಲೆಯಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿತ್ತು. * ನಾಗಾಲ್ಯಾಂಡ್ ನಲ್ಲಿ ನಡೆದಿರುವ ಈ ಘಟನೆಯಿಂದಾಗಿ ಈ ಬಾರಿ ಅಲ್ಲಿನ ಹಾರ್ನ್ಬಿಲ್ ಹಬ್ಬ ರದ್ದುಗೊಳಿಸಿದ ಬುಡಕಟ್ಟು ಜನರು ತಿಳಿಸಿದ್ದಾರೆ. * ಪ್ರಸ್ತುತ ನಾಗಲ್ಯಾಂಡ್ ನ ಮುಖ್ಯಮಂತ್ರಿ ನಿಫಿಯು ರಿಯೊ ಅವರು ಈ ನಾಗರಿಕರ ಹತ್ಯೆಯ ಖಂಡನೀಯವಾಗಿದೆ, ಹಾಗೂ ದುಃಖಿತ ಕುಟುಂಬಗಳಿಗೆ ಸಂತಾಪವನ್ನು ಸೂಚಿಸಿದ್ದಾರೆ. * ಭಾರತೀಯ ಭದ್ರತಾ ಪಡೆ ಹತ್ಯೆಯಾಗಿರುವವರು ದಿನಗೂಲಿ ಕಾರ್ಮಿಕರಾಗಿದ್ದಾರೆ, ಇವರು ಕಲ್ಲಿದ್ದಲು ಗಣಿಯಿಂದ ಸಂಜೆವೇಳೆ ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದುತಿಳಿಸಿದ್ದಾರೆ.