Job Description: * ಪ್ರಸ್ತುತ ಇಂಡೊನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದಲ್ಲಿನ ಮೌಂಟ್ ಸಿಮೇರು ಪ್ರದೇಶದಲ್ಲಿ ಜ್ವಾಲಾಮುಖಿ ಸ್ಫೋಟ ಸಂಭವಿಸಿದೆ, ಈ ಸ್ಫೋಟದಿಂದಾಗಿ ಸುಮಾರು 13 ರಿಂದ 14 ಜನರು ಮೃತಪಟ್ಟಿದ್ದಾರೆ, ಹಾಗೂ ಹಲವು ಜನರಿಗೆ ಗಾಯಗಳಾಗಿವೆ ಎನ್ನಲಾಗಿದೆ. * ಈ ಜ್ವಾಲಾಮುಖಿ ಸ್ಫೋಟವಾಗಿರುವ ಸಿಮೇರು ಸಮೀಪದ ಲುಮಾಜಾಂಗ್ನ ಕೆರೊಬೊಕನ್ ಎಂಬ ಗ್ರಾಮದಲ್ಲಿ ಸುಮಾರು 300 ಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದವು, ಇದೀಗ ಅಲ್ಲಿನ ಬಹತೇಕ ಮನೆಗಳು ಹಾಳಾಗಿವೆ ಎನ್ನಲಾಗಿದೆ. * ಪ್ರಸ್ತುತ ಕೆರೊಬೊಕನ್ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ ಇದುವರೆಗೆ ಅಂದಾಜು 13 ರಿಂದ 14 ಮೃತದೇಹಗಳು ಪತ್ತೆಯಾಗಿವೆ, ಹಾಗೂ 41 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಸರಿ ಸುಮಾರು 12,000 ಮೀ ಎತ್ತರದಲ್ಲಿ ಆಕಾಶವು ಬೂದಿಯಿಂದ ಮುಚ್ಚಿದಂತಾಗಿತ್ತು ಅಲ್ಲಿನ ಸುತ್ತ ಮುತ್ತಲಿನ ಬಹುತೇಕ ಪ್ರದೇಶಗಳಲ್ಲಿ ಹಗಲು ರಾತ್ರಿ ಒಂದೇ ರೀತಿಯಾಗಿದ್ದವು. * ಈ ಹಿಂದೆ ಕಳೆದ ಜನೇವರಿಯಲ್ಲಿ ಸೆಮೆರು ಪರ್ವತ ಸ್ಫೋಟಗೊಂಡಿತ್ತು, ಮತ್ತು 2017 ಮತ್ತು 2019 ರಲ್ಲಿ ಈ ಪ್ರದೇಶದಲ್ಲಿ ಸ್ಫೋಟಗಳು ಸಂಭವಿಸಿದ್ದವು ಎಂಬ ಮಾಹಿತಿ ಇದೆ.