Job Description: * ಪ್ರತಿ ವರ್ಷವು ಡಿಸೆಂಬರ್. 04 ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಣೆ ಮಾಡಲಾಗುತ್ತದೆ. * ಈ ವರ್ಷ ಭಾರತೀಯ ನೌಕಾಪಡೆಯ ದಿನವನ್ನು ಭಾರತೀಯ ನೌಕಾಪಡೆ - ಯುದ್ಧ ಸಿದ್ಧ, ವಿಶ್ವಾಸಾರ್ಹ ಮತ್ತು ಒಗ್ಗೂಡಿಸುವದು ಎಂಬ ವಿಷಯದ ಅಡಿಯಲ್ಲಿ ಆಚರಣೆ ಮಾಡಲಾಗುತ್ತಿದೆ. * ಪ್ರತಿ ವರ್ಷವು ಭಾರತೀಯ ನೌಕಾಪಡೆಯ ದಿನವನ್ನು ಆಪರೇಷನ್ ಟ್ರೈಡೆಂಟ್ ಸ್ಮರಣಾರ್ಥವಾಗಿ ಆಚರಣೆ ಮಾಡಲಾಗುತ್ತದೆ, ಈ ಹಿಂದೆ 1971 ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ದಾಳಿ ನಡೆಸಲು ಭಾರತೀಯ ನೌಕಾಪಡೆಯು ಈ ಕಾರ್ಯಾಚರಣೆಯನ್ನು ಆರಂಭಿಸಿದೆ. * ಪ್ರಸ್ತುತ ಈ ಆಪರೇಷನ್ ಟ್ರೈಡೆಂಟ್'ನ್ನು ಡಿಸೆಂಬರ್. 04 ರಂದು ರಾತ್ರಿ ಆರಂಭಿಸಲಾಯಿತು, ಆ ಸಂಧರ್ಭದಲ್ಲಿ ಭಾರತೀಯ ನೌಕಾಪಡೆಯು ಕರಾಚಿಯಲ್ಲಿನ ಪಾಕಿಸ್ತಾನ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿರುವಂತಹ ಇಂಧನ ಸಂಗ್ರಹಣೆ ಟ್ಯಾಂಕರ್ಗಳನ್ನು ನಾಶಪಡಿಸಿತು, ಹಾಗೂ ಪಾಕಿಸ್ತಾನದ 4 ದೋಣಿಗಳನ್ನು ಮುಳುಗಿಸಿ 500 ಪಾಕಿಸ್ತಾನದ ನೌಕಾ ಸಿಬ್ಬಂದಿಯನ್ನು ಸಂಹಾರ ಮಾಡಿತು. * ಭಾರತ ಪಾಕಿಸ್ತಾನದ ಯುದ್ಧದ ಸಂಧರ್ಭದಲ್ಲಿ ಅಂದರೆ 1971 ರಲ್ಲಿ ಭಾರತವು ಮೊದಲ ಬಾರಿಗೆ ಹಡಗು ವಿರೋಧಿ ಕ್ಷಿಪಣಿಯನ್ನು ನಿಯೋಜನೆ ಮಾಡಿತು. * ಈ ಹಿಂದೆ 1612 ರಲ್ಲಿ ಬ್ರಿಟಿಷ್ ವ್ಯಾಪಾರಿ ಹಡಗುಗಳನ್ನು ರಕ್ಷಿಸಲು ಭಾರತೀಯ ನೌಕಾಪಡೆಯನ್ನು ಸ್ಥಾಪನೆ ಮಾಡಲಾಗಿದೆ.