Job Description: * ಪ್ರಸ್ತುತ 'Yahoo ಸರ್ಚ್ ಇಂಜಿನ್' ಹುಡುಕಾಟದ ಪಟ್ಟಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 1 ನೇ ಸ್ಥಾನ, ಹಾಗೂ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು 2 ನೇ ಸ್ಥಾನದಲ್ಲಿದ್ದಾರೆ. * ಪ್ರಸ್ತುತ ಈ ಇಬ್ಬರು ವ್ಯಕ್ತಿಗಳು ಸಾಮಾಜಿಕ ಮಾಧ್ಯಮದಲ್ಲಿ ಅತೀ ಹೆಚ್ಚಾಗಿ ಹುಡುಕಾಡಲ್ಪಟ್ಟ ವ್ಯಕ್ತಿಗಳಾಗಿದ್ದಾರೆ. * 2021 ರ 'Yahoo' ಸರ್ಚ್ ಇಂಜಿನ್ ಇಂಡಿಯಾ ಇಯರ್ ಎಂಡರ್ ಪಟ್ಟಿಯಲ್ಲಿ ಅತೀ ಹೆಚ್ಚಾಗಿ ಹುಡುಕಾಡಲ್ಪಟ್ಟ ಕ್ರೀಡಾ ವ್ಯಕ್ತಿಗಳು: ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಹಾಗೂ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿದ್ದಾರೆ. * ಈ 'Yahoo' ಸರ್ಚ್ ಇಂಜಿನ್ ಹುಡುಕಾಟದ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2017 ರಿಂದ ಮೊದಲ ಸ್ಥಾನದಲ್ಲೇ ಮುಂದುವರೆಯುತ್ತಿದ್ದಾರೆ.