Job Description: * ಇತ್ತೀಚೆಗೆ ನಿಜಾಮುದ್ದೀನ್ ಬಸ್ತಿ ಯೋಜನೆಗೆ ಯುನೆಸ್ಕೋ ಎರಡು ಪರಂಪರೆ ಪ್ರಶಸ್ತಿಗಳನ್ನು ನೀಡಿದೆ, ಈ ನಿಜಾಮುದ್ದೀನ್ ಬಸ್ತಿ ಯೋಜನೆಗೆ ಸುಸ್ಥಿರ ಪ್ರಶಸ್ತಿ ಹಾಗೂ ಶ್ರೇಷ್ಠತೆಯ ಪ್ರಶಸ್ತಿಗಾಗಿ ನೀಡಲಾಗಿದೆ. * ಈ ಯೋಜನೆಯಿಂದಾಗಿ 14 ನೇ ಶತಮಾನದಲ್ಲಿನ ಸೂಫಿ ಸಂತ ಹಜರತ್ ನಿಜಾಮುದ್ದೀನ್ ಔಲಿಯಾದಲ್ಲಿ ನೆಲೆಸಿರುವ 20 ಕ್ಕೂ ಅಧಿಕ ಐತಿಹಾಸಿಕ ಸ್ಮಾರಕಗಳನ್ನು ಮರು ಸ್ಥಾಪಿಸಲಾಗಿದೆ. * ಪ್ರಸ್ತುತ ಹುಮಾಯೂನ್ ಸಮಾಧಿ ಮತ್ತು ಬಟಾಶೆವಾಲಾ ಸಮಾಧಿ, ಹಾಗೂ ಕವಿ ರಹೀಮ್ ಖಾನ್ ಸಮಾಧಿಯನ್ನು ಈ ನಿಜಾಮುದ್ದೀನ್ ಪ್ರದೇಶವು ಒಳಗೊಂಡಿದೆ, ಈ ನಿಜಾಮುದ್ದೀನ್ ಬಸ್ತಿ ಯೋಜನೆಯಿಂದ ಈ ಸಮಾಧಿಗಳನ್ನೂ ನವೀಕರಿಸಲಾಗಿದೆ. * ಈ ಹಿಂದೆ 2007 ರಲ್ಲಿ ನಿಜಾಮುದ್ದೀನ್ ಬಸ್ತಿ ಯೋಜನೆಯನ್ನು ಅಗಾ ಕಾನ್ ಟ್ರಸ್ಟ್ ಫಾರ್ ಕಲ್ಚರ್, ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ, ದೆಹಲಿ ಅರ್ಬನ್ ಹೆರಿಟೇಜ್ ಫೌಂಡೇಶನ್ ಹಾಗೂ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಆರಂಭಿಸಿವೆ. * ಪ್ರಸ್ತುತ ಹುಮಾಯೂನ್ ಅವರ ಮೊದಲ ಪತ್ನಿ ಬೇಗಾ ಬೇಗಂ ಅವರು ಹುಮಾಯೂನ್ ಸಮಾಧಿಯನ್ನು ನಿಯೋಜಿಸಿದರು, ಇದನ್ನು 1993 ರಲ್ಲಿ ವಿಶ್ವ ಪರಂಪರೆಯ ತಾಣವೆಂದು ಘೋಷಣೆ ಮಾಡಿದರು, ಇದೀಗ ಈ ಸಮಾಧಿಯನ್ನು 'ಚಾರ್ ಬಾಗ್' ಎಂಬ 30 ಎಕರೆ ಉದ್ಯಾನದಲ್ಲಿ ಇರಿಸಲಾಗಿದೆ.