Job Description: * ಪ್ರಸ್ತುತ ಗುಜರಾತ್ ರಾಜ್ಯದ ರಾಜಧಾನಿ ಅಹ್ಮದಾಬಾದ್ ನಗರವು, ಇದೀಗ ವಿಶ್ವದಲ್ಲೇ ಅಗ್ಗದ ನಗರಗಳಲ್ಲಿನ ಒಂದು ನಗರವಾಗಿದೆ. * ಇತ್ತೀಚಿಗೆ ಬ್ರಿಟನ್ ಮೂಲದ ಎಕಾನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಸಂಸ್ಥೆಯು ನಡೆಸಿರುವ ಸಮೀಕ್ಷೆಯನ್ನು ನಡೆಸಿದೆ, ಆ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ, ಅಷ್ಟೇ ಅಲ್ಲದೇ ಈ ಸಮೀಕ್ಷೆಯ ಮೂಲಕ ಅಲ್ಪ ಆದಾಯದಲ್ಲಿ ಜೀವನ ನಡೆಸಬಲ್ಲ ಟಾಪ್ 10 ನಗರಗಳನ್ನು ಆಯ್ಕೆ ಮಾಡಲಾಗಿದೆ, ಆ ಪಟ್ಟಿಯಲ್ಲಿ ಗುಜರಾತ್ ರಾಜ್ಯದ ಅಹ್ಮದಾಬಾದ್ ನಗರವು 7ನೇ ಸ್ಥಾನವನ್ನು ಪಡೆದುಕೊಂಡಿದೆ, ಹಾಗೂ ಪಾಕಿಸ್ತಾನದ ಕರಾಚಿ 6ನೇ ಸ್ಥಾನ ಪಡೆದುಕೊಂಡಿದೆ. * ಪ್ರಸ್ತುತ ವಿಶ್ವದಲ್ಲೇ ಅತ್ಯಂತ ಅಗ್ಗದ ನಗರವಾಗಿ ಸಿರಿಯಾದ ದಮಾಸ್ಕಸ್ ನಗರವು ಅಗ್ರ ಸ್ಥಾನದಲ್ಲಿದೆ. * ಇದೀಗ ಜೀವನ ನಡೆಸಲು ಅವಶ್ಯವಾಗಿರುವ ವಸ್ತುಗಳ ಬೆಲೆಯನ್ನು ಒಟ್ಟಾರೆ 173 ನಗರಗಳಲ್ಲಿ ಪರಿಗಣಿಸಿ ಈ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. * ವಿಶ್ವದ ಅತಿ ದುಬಾರಿ ನಗರಗಳನ್ನೂ ಸಮೀಕ್ಷೆ ಮೂಲಕ ಪಟ್ಟಿ ಮಾಡಲಾಗಿದೆ, ಈ ಪಟ್ಟಿಯಲ್ಲಿ ಇಸ್ರೇಲ್ನ ಟೆಲ್ ಅವಿವ್ ನಗರವು ಜನಜೀವನಕ್ಕೆ ಅತ್ಯಂತ ದುಬಾರಿಯಾಗಿದೆ ವರದಿಯಾಗಿದೆ. * ಕಳೆದ ವರ್ಷ ಈ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ದುಬಾರಿ ನಗರಗಳ ಪಟ್ಟಿಯಲ್ಲಿ ಇಸ್ರೇಲ್ನ ಟೆಲ್ ಅವಿವ್ ನಗರವು 5ನೇ ಸ್ಥಾನದಲ್ಲಿತ್ತು. * 2019ರಲ್ಲಿ ಪ್ರಕಟವಾಗಿರು ಪಟ್ಟಿಯ ಪ್ರಕಾರ ವಿಶ್ವದಲ್ಲಿನ ಅಗ್ಗದ ನಗರಗಳಲ್ಲಿ ಭಾರತದ ಬೆಂಗಳೂರು, ಚೆನ್ನೈ ಹಾಗೂ ದೆಹಲಿ 5, 8 ಮತ್ತು 10ನೇ ಸ್ಥಾನವನ್ನು ಪಡೆದಿದ್ದವು, ಆದರೆ ಈ ವರ್ಷ ಈ ಯಾವುದೇ ನಗರವು ಟಾಪ್ 10'ರ ಸ್ಥಾನವನ್ನು ಪಡೆದುಕೊಂಡಿಲ್ಲ. * ವಿಶ್ವದ ದುಬಾರಿ ನಗರಗಳ ಪಟ್ಟಿ: 1. ಇಸ್ರೇಲ್'ನ ಟೆಲ್ ಅವಿವ್, 2. ಪ್ಯಾರಿಸ್, ಸಿಂಗಾಪುರ, 3. ಜುರಿಚ್, 4. ಹಾಂಗ್ಕಾಂಗ್, 5. ನ್ಯೂಯಾರ್ಕ್. * ವಿಶ್ವದ ಅಗ್ಗದ ನಗರಗಳ ಪಟ್ಟಿ: 1. ಸಿರಿಯಾ- ದಮಾಸ್ಕಸ್. 2. ಲಿಬಿಯಾ-ತ್ರಿಪೋಲಿ. 3. ಉಜ್ಬೇಕಿಸ್ತಾನ-ತಾಷ್ಕೆಂಟ್. 4. ತುನಿಸಿಯಾ- ತುನಿಸ್. 5. ಕಜಕಿಸ್ತಾನ- ಅಲ್ಮಾಟಿ. 6. ಪಾಕಿಸ್ತಾನ- ಕರಾಚಿ. 7. ಭಾರತ- ಅಹಮದಾಬಾದ್ ನಗರ.