Job Description: * ಜಗತ್ತಿನ ಮೊದಲ ಸಂಪೂರ್ಣ ವಿದ್ಯುತ್ ಚಾಲಿತ ಹಾಗೂ ಸ್ವಯಂ-ಚಾಲಿತ ಕಂಟೇನರ್ ಹಡಗು ತನ್ನ ಮೊದಲ ಪ್ರಯಾಣವನ್ನು ನಾರ್ವೆಯ ದಕ್ಷಿಣ ಕರಾವಳಿಯವರೆಗೆ ಚಲಿಸಲು ಸಿದ್ಧವಾಗುತ್ತಿದೆ. * ಈ ಸ್ವಯಂ-ಚಾಲಿತ ದಿ ಯಾರಾ ಬಿರ್ಕ್ಲ್ಯಾಂಡ್ ಹೆಸರಿನ ಈ ಕಂಟೇನರ್ ಹಡಗು 80 ಮೀ. ಉದ್ದವಿದೆ, * ಪ್ರಸ್ತುತ ಈ ಹಡಗು ದಕ್ಷಿಣ ನಾರ್ವೆಯ ಪಾರ್ಸ್ಗ್ರನ್ನಲ್ಲಿರುವ ಸಿದ್ಧವಾಗುವ ಗೊಬ್ಬರವನ್ನು ಉತ್ಪಾದನಾ ಘಟಕದಿಂದ ಬ್ರೆವಿಕ್ನಲ್ಲಿರುವ ಕಂಪನಿಗೆ ರಫ್ತು ಮಾಡಲು ಬಂದರಿನ ಮಧ್ಯೆ ಇರುವ 14 ಕಿ.ಮೀ. ದೂರದ ಪ್ರಯಾಣವನ್ನು ಲಾರಿಗಳ ಬದಲಿಗೆ ಈ ಹಡಗು ಸರಕು ಹೊತ್ತು ಚಲಿಸಲಿದೆ ಎಂದು ತಿಳಿಸಿದೆ. * ಈ ಹಡಗನ್ನು ವಾರ್ಡ್ ನಾರ್ವೆ ಹೆಸರಿನ ಕಂಪನಿ ತಯಾರಿಸಿದೆ, ಇದು ಸೆನ್ಸಾರ್ ಮತ್ತು ರಿಮೋಟ್ ನಿಯಂತ್ರಣದ ಮೂಲಕ ಸ್ವಯಂ ನಿರ್ವಹಣೆಯ ಕ್ಷಮತೆಯನ್ನು ಹೊಂದಿದೆ, ಅಷ್ಟೇ ಅಲ್ಲದೇ ಈ ನೌಕೆ ಸ್ವಿಸ್ ಲೆಕ್ಲೇನ್ನ ಬ್ಯಾಟರಿಗಳಿಂದ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. * ಈ ಹಡಗು ವಾರದಲ್ಲಿ ಎರಡು ಬಾರಿ ತನ್ನ ಯಾನಗಳನ್ನು ಬೆಳೆಸಲಿದೆ, ಇದು ಆ ಸಮಯದಲ್ಲಿ 20 ಅಡಿಯ 120 ಕಂಟೇನರ್ಗಳಷ್ಟು ರಸಗೊಬ್ಬರವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಾಣಿ ಮಾಡಲಿದೆ ಎಂದು ತಿಳಿಸಿದ್ದಾರೆ.