Job Description: * ಪ್ರಸ್ತುತ ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿ ಮಠದ ಗೋಶಾಲೆ ಆವರಣದಲ್ಲಿ ನಿರ್ಮಿಸಲಾಗಿರುವ ಗರ್ಭಸಂಸ್ಕಾರ ಕೇಂದ್ರವನ್ನು ಕನೇರಿಯ ಶ್ರೀ ಕಾಡಸಿದ್ದೇಶ್ವರಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದತ್ತಾತ್ರೇಯ ಹೊಸಬಾಳೆ ಅವರು ಲೋಕಾರ್ಪಣೆ ಮಾಡಿದರು. * ಈ ಗರ್ಭಸಂಸ್ಕಾರ ಕೇಂದ್ರವು ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲ ಸೃಷ್ಟಿಸುವ ನಿಟ್ಟಿನಲ್ಲಿ, ಹಾಗೂ ಜನಿಸುವ ಮಗುವಿಗೆ ಗರ್ಭದಲ್ಲೇ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ, ಇದು ದೇಶದ 2ನೇ ಗರ್ಭ ಸಂಸ್ಕಾರ ಕೇಂದ್ರವಾಗಿದೆ. * ಈ ಕೇಂದ್ರವು ಗರ್ಭಾವಸ್ಥೆಯಿಂದ ಹಿಡಿದು, ಸೀಮಂತ ಕಾರ್ಯದವರೆಗೂ ವಿವಿಧ ರೀತಿಯ ತರಬೇತಿ, ಯೋಗ, ಧ್ಯಾನ, ಗೋ ಪೂಜೆ, ಗೋ ಮಾತೆ ಸೇವೆ ಹೀಗೆ ಇನ್ನು ಹಲವು ಕಾರ್ಯಗಳನ್ನು ದಂಪತಿಗಳಿಂದ ಮೂಲಕ ಮಾಡಿಸಲಾಗುತ್ತದೆ, ಪ್ರಸ್ತುತ ಗುಜರಾತ್ ಹೊರತುಪಡಿಸಿ ದೇಶದ 2ನೇ ಗರ್ಭ ಸಂಸ್ಕಾರ ಕೇಂದ್ರ ಇದಾಗಿದೆ ಎಂದು ತಿಳಿಸಿದ್ದಾರೆ.