Job Description: * ಪ್ರಸ್ತುತ ಮಧ್ಯಪ್ರದೇಶ ರಾಜ್ಯದಲ್ಲಿನ ಮಹಿಳಾ ಕಾನ್ಸ್ಟೆಬಲ್ ಪುರುಷನಾಗಿ ಬದಲಾಗಲು ಅಲ್ಲಿನ ಗೃಹ ಇಲಾಖೆಯು ಅನುಮತಿ ನೀಡಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ರಾಜ್ಯದಲ್ಲಿನ ಇತರ ಪುರುಷ ಪೊಲೀಸ್ ಕಾನ್ಸ್ಟೆಬಲ್ಗಳಂತೆ ಪುರುಷನಾಗಿ ಬದಲಾದ ಸಿಬ್ಬಂದಿಯೂ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ, ಇವರು ಬಾಲ್ಯದಿಂದಲೇ ಅವರು ಮಾನಸಿಕವಾಗಿ 'ಲಿಂಗ ಗುರುತಿಸುವಿಕೆ' ವಿಚಾರವಾಗಿ ಬಹಳ ಸಮಸ್ಯೆ ಎದುರಿಸುತ್ತಿದ್ದರು ಎಂದು ಮನಃಶಾಸ್ತ್ರಜ್ಞರು ಮಾಹಿತಿಯನ್ನು ನೀಡಿದ್ದಾರೆ, ಇದಕ್ಕೆ ರಾಜ್ಯ ಗೃಹ ಇಲಾಖೆಯು ಈ ಮಹಿಳಾ ಪೇದೆಗೆ ಪುರುಷನಾಗಿ ಲಿಂಗ ಬದಲಿಸಿಕೊಳ್ಳಲು ಅನುಮತಿ ನೀಡುವಂತೆ ಡಿಜಿಪಿ ಅವರಿಗೆ ನಿರ್ದೇಶನ ನೀಡಿದೆ' ಎಂದು ಡಾ. ರಾಜೇಶ್ ಅವರು ಮಾಹಿತಿಯನ್ನು ನೀಡಿದ್ದಾರೆ. *ಈ ಹಿಂದೆ 2019ರಲ್ಲಿ ಕಾನ್ಸ್ಟೆಬಲ್ ಲಿಂಗ ಬದಲಾವಣೆಯ ವಿಚಾರವಾಗಿ ಪೊಲೀಸ್ ಇಲಾಖೆಗೆ ಅರ್ಜಿಯನ್ನು ಹಾಕಿದ್ದರು, ಆ ಸರ್ಕಾರಿ ಗೆಜೆಟ್'ನಲ್ಲಿ ಪುರುಷನಾಗಿ ಬದಲಾಗಲು ಆಶೆಯನ್ನು ವ್ಯಕ್ತಪಡಿಸಿದ್ದರು, ಅಷ್ಟೇ ಅಲ್ಲದೇ ಪೊಲೀಸ್ ಇಲಾಖೆಯು ಕಾನ್ಸ್ಟೆಬಲ್ ಅವರ ಈ ಅರ್ಜಿಯನ್ನು ರಾಜ್ಯ ಗೃಹ ಇಲಾಖೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. * ಪ್ರತಿ ಭಾರತೀಯ ಪ್ರಜೆಗೆ ಕಾನೂನು ಪ್ರಕಾರ ತನ್ನ ಲಿಂಗತ್ವ, ಹಾಗೂ ಧರ್ಮ ಮತ್ತು ಜಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಈ ಹಕ್ಕಿನ ಅನ್ವಯ ರಾಜ್ಯ ಗೃಹ ಇಲಾಖೆಯು ಕಾನ್ಸ್ಟೆಬಲ್ಗೆ ಪುರುಷನಾಗಿ ಬದಲಾಗಲು ಅನುಮತಿ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನವನ್ನು ನೀಡಲಾಗಿದೆ, ಆ ಮಹಿಳಾ ಪೇದೆಯ ಆಶೆಯಂತೆ ಲಿಂಗ ಬದಲಿಸಿಕೊಂಡು ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.