Job Description: * ಪ್ರತಿ ವರ್ಷವು ಡಿಸೆಂಬರ್. 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಣೆ ಮಾಡಲಾಗುತ್ತದೆ, ಪ್ರಸ್ತುತ 1988 ರಿಂದ ಈ ದಿನವನ್ನು ಆಚರಿಸಲು ಆರಂಭಿಸಲಾಗಿದೆ, ಅಷ್ಟೇ ಅಲ್ಲದೇ ಈ ದಿನವನ್ನು ಎಚ್ಐವಿ(HIV) ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಆಚರಣೆ ಮಾಡಲಾಗುತ್ತದೆ. * ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು ಈ ವರ್ಷ ವಿಶ್ವ ಏಡ್ಸ್ ದಿನವನ್ನು ಅಸಮಾನತೆಗಳನ್ನು ಕೊನೆಗೊಳಿಸುವುದು ಎಂಬ ವಿಷಯದ ಅಡಿಯಲ್ಲಿ ಆಚರಿಸಿದೆ. * ಪ್ರತಿ ವರ್ಷವು ನವೆಂಬರ್ ತಿಂಗಳಿನ ಕೊನೆಯ ವಾರವನ್ನು ಏಡ್ಸ್ ಜಾಗೃತಿ ಸಪ್ತಾಹ ವಾರವಾಗಿ ಆಚರಣೆ ಮಾಡಲಾಗುತ್ತದೆ, ಈ ಮೊದಲು 1984 ರಲ್ಲಿ ಮೊದಲ ಏಡ್ಸ್ ಜಾಗೃತಿ ವಾರವನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಚರಿಸಲು ಆರಂಭಿಸಲಾಯಿತು. * ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ನೀಡಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ 2017 ರ ಹೊತ್ತಿಗೆ ಭಾರತದಲ್ಲಿ ಅಂದಾಜು 2.14 ಮಿಲಿಯನ್ ಜನರು ಏಡ್ಸ್(HIV) ಸೋಂಕು ತಗುಲಿದೆ ಎಂದು ತಿಳಿಸಿದೆ. * ಪ್ರಸ್ತುತ 2018 ರ ವೇಳೆಗೆ ದಕ್ಷಿಣ ಆಫ್ರಿಕಾ ಹಾಗೂ ನೈಜೀರಿಯಾ ದೇಶಗಳ ನಂತರ ಭಾರತವು ವಿಶ್ವದ 3ನೇ ಅತಿದೊಡ್ಡ ಏಡ್ಸ್ ರೋಗಿಗಳನ್ನು ಹೊಂದಿರುವ ದೇಶವಾಗಿದೆ. * ಈ ಹಿಂದೆ 1992 ರಲ್ಲಿ ರಾಷ್ಟ್ರೀಯ ಏಡ್ಸ್(AIDS) ನಿಯಂತ್ರಣ ಸಂಸ್ಥೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾಗಿದೆ, ಭಾರತದಲ್ಲಿ ಪ್ರತಿ 2 ವರ್ಷಗಳಿಗೊಮ್ಮೆ ಈ ರೋಗದ ಪ್ರಕರಣಗಳನ್ನು ಅಂದಾಜಿಸಲಾಗುತ್ತದೆ, ಭಾರತದಲ್ಲಿ ಕೊನೆಯದಾಗಿ 2017 ರಲ್ಲಿ ಈ ರೋಗದ ಪ್ರಕರಣಗಳನ್ನು ಅಂದಾಜಿಸಲಾಗಿದೆ.