Job Description: * ಪ್ರಸ್ತುತ ಕಳೆದ 14 ವರ್ಷಗಳಿಂದ ಬೆಲೆ ಏರಿಕೆ ಕಾಣದ ಬೆಂಕಿ ಪೊಟ್ಟಣದ (Match Box) ಬೆಲೆಯು ಇದೇ ಡಿಸೆಂಬರ್. 1 ರಿಂದ ನೂತನ ದರ ಜಾರಿಯಾಗುತ್ತಿದೆ. * ಇದೀಗ ದಿನನಿತ್ಯ ಬಳಸುವ ಬೆಂಕಿ ಪೊಟ್ಟಣದ ಮೇಲೆ ಶೇ 100 ರಷ್ಟು ಬೆಲೆ ಹೆಚ್ಚಳವಾಗಲಿದೆ, ಇಲ್ಲಿಯತನಕ 1 ರೂ.ಗೆ ಲಭ್ಯವಾಗುತ್ತಿರುವ ಬೆಂಕಿ ಪೊಟ್ಟಣವು ಇನ್ನು ಮುಂದೆ 2 ರೂ.ಗೆ ಲಭ್ಯವಾಗಲಿದೆ. * ಪ್ರಸ್ತುತ ಬೆಂಕಿ ಪೊಟ್ಟಣದ ನಿರ್ಮಾಣ ವೆಚ್ಚವು ಅಂದರೆ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳವಾಗಿರುವ ಹಿನ್ನಲೆಯಿಂದಾಗಿ ಬೆಂಕಿ ಪೊಟ್ಟಣ ದರ ಏರಿಕೆಯಾಗಿದೆ, ಆದರೆ ಇದೀಗ ಅದರಲ್ಲಿನ ಬೆಂಕಿ ಕಡ್ಡಿಗಳ ಸಂಖ್ಯೆ ಕೂಡ ಏರಿಕೆ ಆಗಿದೆ, ಈ ಮೊದಲು ಬೆಂಕಿ ಪೊಟ್ಟಣದಲ್ಲಿ 36 ಬೆಂಕಿ ಕಡ್ಡಿಗಳಿದ್ದವು ಇದೀಗ ಈ 2 ರೂ. ಬೆಲೆಯ ಬೆಂಕಿ ಪೊಟ್ಟಣದಲ್ಲಿ 50 ಬೆಂಕಿಕಡ್ಡಿಗಳು ಇರಲಿವೆ ಎಂದು ತಿಳಿಸಿದ್ದಾರೆ.