Job Description: * ಪ್ರಸ್ತುತ ಕೇಂದ್ರ ಸರ್ಕಾರವು ಲೋಕಸಭೆಗೆ ನೀಡಿರುವ ಮಾಹಿತಿಯ ಪ್ರಕಾರ ಕಳೆದ '5' ವರ್ಷಗಳಲ್ಲಿ ಸರಿ ಸುಮಾರು '6' ಲಕ್ಷಕ್ಕೂ ಅಧಿಕ ಭಾರತೀಯ ಪ್ರಜೆಗಳು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ತಿಳಿಸಲಾಗಿದೆ. * ಪ್ರಸ್ತುತ 1,33,83,718 ಭಾರತೀಯರು ವಿದೇಶಗಳಲ್ಲಿ ವಾಸವಾಗಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ವಿದೇಶಾಂಗ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯನ್ನು ತಿಳಿಸಿದ್ದಾರೆ * ಈ ಹಿಂದೆ 2017 ರಲ್ಲಿ 1,33,049 ಭಾರತೀಯ ಪ್ರಜೆಗಳು, 2018 ರಲ್ಲಿ 1,34,561 ಭಾರತೀಯ ಪ್ರಜೆಗಳು, 2019 ರಲ್ಲಿ 1,44,017 ಭಾರತೀಯ ಪ್ರಜೆಗಳು, 2020 ರಲ್ಲಿ 85,248 ಭಾರತೀಯ ಪ್ರಜೆಗಳು, ಹಾಗೂ 2021ರ ಸೆಪ್ಟೆಂಬರ್. 30 ರವರೆಗೆ 1,11,287 ಭಾರತೀಯ ಪ್ರಜೆಗಳು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಮಾಹಿತಿಯನ್ನು ನೀಡಿದ್ದಾರೆ.