Job Description: * ಪ್ರಸ್ತುತ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಡ್ಮಿರಲ್ ಆರ್.ಹರಿಕುಮಾರ್ ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ. * ಈ ಮೊದಲು ಅಡ್ಮಿರಲ್ ಕರಮಬೀರ್ ಸಿಂಗ್ 2 ವರ್ಷಗಳ ಅಧಿಕಾರದ ಅವಧಿ ಮುಗಿಸಿ ನಿವೃತ್ತರಾಗಿದ್ದಾರೆ, ಇವರು ನೌಕಾಪಡೆಯಲ್ಲಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. * ಇದೀಗ ಅಡ್ಮಿರಲ್ ಆರ್.ಹರಿಕುಮಾರ್ ಅವರು ನೌಕಾಪಡೆಯ 25 ನೇ ಮುಖ್ಯಸ್ಥರಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ, ಈ ಮೊದಲು ಇವರು ವೆಸ್ಟರ್ನ್ ನೇವಲ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ, ಇವರು 1983 ರ ಜನೇವರಿ.1 ರಂದು ನೌಕಾಪಡೆಗೆ ಸೇರಿದ್ದಾರೆ. * ಅಡ್ಮಿರಲ್ ಆರ್.ಹರಿಕುಮಾರ್ ಅವರು ತಮ್ಮ 38 ವರ್ಷಗಳ ವೃತ್ತಿಜೀವನದಲ್ಲಿ ಕೋಸ್ಟ್ಗಾರ್ಡ್ ಶಿಪ್ ಸಿ-01 ಹಾಗೂ ಭಾರತೀಯ ನೌಕಾಪಡೆ ಹಡಗುಗಳ ಕಮಾಂಡರ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ, ಅಷ್ಟೇ ಅಲ್ಲದೇ ನಿಷಾಂಕ್,ಕೋರಾ,ರಣವೀರ ಮತ್ತು ವಿಮಾನವಾಹಕ ಐಎನ್ಎಸ್ (INS) ವಿರಾಟ್ ನೌಕೆಗಳ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. * ಅಡ್ಮಿರಲ್ ಆರ್.ಹರಿಕುಮಾರ್ ಅವರು ಪರಮ ವಿಶಿಷ್ಟ ಸೇವಾ ಪದಕ,ಅತಿ ವಿಶಿಷ್ಟ ಸೇವಾ ಪದಕ ಹಾಗೂ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.