Job Description: * ಪ್ರಸ್ತುತ ಪ್ರಪಂಚದ ಭೂಪಟದಲ್ಲಿ ಹೊಸ ರಾಷ್ಟ್ರ ಉದಯವಾಗಿದೆ, ಇತ್ತೀಚಿಗೆ ಕೆರೆಬಿಯನ್ ದ್ವೀಪ ಸಮೂಹ ಹಾಗೂ ಉತ್ತರ ಅಮೆರಿಕ ಖಂಡ ವ್ಯಾಪ್ತಿಯಲ್ಲಿನ ಬಾರ್ಬಡೋಸ್ ಸ್ವತಂತ್ರ ರಾಷ್ಟ್ರ ಎಂದು ಘೋಷಣೆ ಮಾಡಿಕೊಂಡಿದೆ. * ಈ ಬಾರ್ಬಡೋಸ್ ಪ್ರದೇಶವು ಸುಮಾರು 400 ವರ್ಷಗಳಿಂದ ಬ್ರಿಟನ್ ರಾಜಮನೆತನದ ಆಳ್ವಿಕೆಯಲ್ಲಿತ್ತು ಇದೀಗ ಈ ಪ್ರದೇಶವು ಬ್ರಿಟನ್ ರಾಜಮನೆತನದ ಆಳ್ವಿಕೆ ಹೊರ ಬಂದು, ಸ್ವತಂತ್ರ ರಾಷ್ಟ್ರ ಎಂದು ಘೋಷಣೆ ಮಾಡಿಕೊಂಡಿದೆ. * ಇದೀಗ ಈ ಬಾರ್ಬಡೋಸ್ ಸ್ವತಂತ್ರ ರಾಷ್ಟ್ರದ ಮೊದಲ ಅಧ್ಯಕ್ಷೆಯಾಗಿ ಡಾಮ್ ಸಾಂಡ್ರಾ ಮಾಸೆನ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಪ್ರಸ್ತುತ ಬ್ರಿಟನ್ ರಾಜಮನೆತನದ ಹಾಲಿ ರಾಣಿ 2 ನೇ ಎಲಿಜಬೆತ್ ಅವರು ಈ ಹೊಸ ರಾಷ್ಟ್ರದ ಉದಯಕ್ಕೆ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. * ಈ ಹಿಂದೆ 1625 ರಲ್ಲಿ ಬ್ರಿಟಿಷರ ಹಡಗುಗಳು ಬಾರ್ಬಡೋಸ್ ದ್ವೀಪಕ್ಕೆ ಪ್ರವೇಶ ಮಾಡಿ ತಮ್ಮ ಹಿಡಿತವನ್ನು ಸಾಧಿಸಿದ್ದರು, ಇದಾದ ಬಳಿಕ ಈ ಪ್ರದೇಶವು ಬ್ರಿಟನ್ ರಾಜಮನೆತನದ ಆಡಳಿತಕ್ಕೆ ಸೇರ್ಪಡೆಯಾಯಿತು, ಅಷ್ಟೇ ಅಲ್ಲದೇ 1966 ನವೆಂಬರ್. 30 ರಂದು ಇದಕ್ಕೆ ಸ್ವಾತಂತ್ರ್ಯ ಸಿಕ್ಕರೂ 54 ಕಾಮನ್ವೆಲ್ತ್ ರಾಷ್ಟ್ರಗಳ ವ್ಯಾಪ್ತಿಯಲ್ಲಿ ಈ ಬಾರ್ಬಡೋಸ್ ದ್ವೀಪ ಒಳಪಟ್ಟಿತ್ತು. * ಇದೀಗ ದೇಶದ ಧ್ವಜ, ಕೋಟ್ ಆಫ್ ಆರ್ಮ್ಸ್, ರಾಷ್ಟ್ರಗೀತೆಗಳನ್ನು ಬದಲಿಸುವ ಯಾವುದೇ ನಿರ್ಧಾರ ನಮ್ಮ ಮುಂದೆ ಇಲ್ಲ, ಹಾಗೂ ಪ್ರತಿ ವರ್ಷ ನವೆಂಬರ್. 30 ರಂದು ದೇಶವು ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಿದೆ ಎಂದು ತಿಳಿಸಿದ್ದಾರೆ.