Job Description: * ಪ್ರಸ್ತುತ ಮಹಾರಾಷ್ಟ್ರ ರಾಜ್ಯವು ಭಾರತದಲ್ಲಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಸ್ಥಾನದಲ್ಲಿದೆ, ಇದರ ನಂತರದ ಸ್ಥಾನ ಅಂದರೆ 2 ನೇ ಸ್ಥಾನದಲ್ಲಿ ಕರ್ನಾಟಕ ರಾಜ್ಯವಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು NCRB ನ ಮಾಹಿತಿಯನ್ನು ಸಂಸತ್ತಿಗೆ ನೀಡಿದ್ದಾರೆ. * ಪ್ರಸ್ತುತ 2020 ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 5,579 ಕ್ಕೆ, ಹಾಗು ಈ ಹಿಂದಿನ ವರ್ಷ 2019 ರಲ್ಲಿ 5,957 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಅವರು ಲೋಕಸಭೆಗೆ ಮಾಹಿತಿಯನ್ನು ನೀಡಿದ್ದಾರೆ. * ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2020 ರ ರೈತರು ಆತ್ಮಹತ್ಯೆ ಮಾಹಿತಿಯನ್ನು ವರದಿ ಮಾಡಿದೆ. * 2020 ರಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡ ರಾಜ್ಯಗಳ ಮಾಹಿತಿ: - ಮಹಾರಾಷ್ಟ್ರ 2,567 ಪ್ರಕರಣಗಳು, ಕರ್ನಾಟಕ 1072 ಪ್ರಕರಣಗಳು, ಆಂಧ್ರಪ್ರದೇಶ 564 ಪ್ರಕರಣಗಳು, ತೆಲಂಗಾಣ 466 ಪ್ರಕರಣಗಳು, ಮಧ್ಯಪ್ರದೇಶ 235 ಪ್ರಕರಣಗಳು, ಛತ್ತೀಸ್ ಗಢ 227 ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 87 ಪ್ರಕರಣಗಳು, ತಮಿಳುನಾಡು 79 ಪ್ರಕರಣಗಳು, ಕೇರಳ 57 ಪ್ರಕರಣಗಳು, ಅಸ್ಸಾಂ 12 ಪ್ರಕರಣಗಳು, ಹಿಮಾಚಲ ಪ್ರದೇಶ 6 ಪ್ರಕರಣಗಳು, ಮೇಘಾಲಯ ಮತ್ತು ಮಿಜೋರಾಂನಲ್ಲಿ 4 ಪ್ರಕರಣಗಳು, ದಾಖಲಾಗಿವೆ ಎಂದು NCRB ಮಾಹಿತಿ ನೀಡಿದೆ.