Job Description: * ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಡಿಜಿಟಲ್ ವ್ಯಾಲೆಟ್ ಯೋಜನೆಯಡಿಯಲ್ಲಿ, ಆಸ್ತಿ ಮಾಲೀಕರ ಕಾರ್ಡ್ ಯೋಜನೆಯನ್ನು ಜಾರಿಗೆ ಮಾಡುತ್ತಿದೆ, ಈ ಯೋಜನೆಯಿಂದ ಆಸ್ತಿ ದಾಖಲೆಗೆ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ, ಅಷ್ಟೇ ಅಲ್ಲದೇ ಈ ಡಿಜಿಟಲ್ ವ್ಯಾಲೆಟ್'ನಲ್ಲಿ ಆಸ್ತಿ ದಾಖಲೆಯ ಸಮಗ್ರ ಮಾಹಿತಿ ಸರಾಗವಾಗಿ ಸಿಗಲಿದೆ ಎಂದು ತಿಳಿಸಿದ್ದಾರೆ. * ರಾಜ್ಯ ಕಂದಾಯ ಇಲಾಖೆಯು ಸರಿ ಸುಮಾರು ಒಂದು ತಿಂಗಳಿನಿಂದ ಸ್ಮಾರ್ಟ್ ಕಾರ್ಡ್ ನ ಅಡಿಯಲ್ಲಿ ಆಸ್ತಿ ದಾಖಲೆ ದಾಖಲಿಸಿ ಮಾಲೀಕರಿಗೆ ನೀಡುವ ಕಾರ್ಯವನ್ನು ಆರಂಭಿಸಲಾಗಿದೆ, ಇಲ್ಲಿಯತನಕ 781 ಸ್ಮಾರ್ಟ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ. * ಕಂದಾಯ ಇಲಾಖೆಯ ಎಟಿಎಂ(ATM) ಅಥವಾ ಡಿಎಲ್(DL) ಮಾದರಿಯ ಕಾರ್ಡ್ ಗಳನ್ನೂ ಜನರ ಕೈಗೆ ನೀಡಲಿದೆ, ಈ ಕಾರ್ಡ್ ನಲ್ಲಿ ಆಸ್ತಿ ಮಾಲೀಕರ ಸಂಪೂರ್ಣ ಮಾಹಿತಿ ಡಿಜಿಟಲ್ (ವರ್ಚುಲ್) ರೂಪದಲ್ಲಿ ಲಭ್ಯವಾಗಲಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.