Job Description: * ಪ್ರಸ್ತುತ ಭಾರತದ ಏಕೈಕ ಪ್ರಮಾಣೀಕೃತ ಸಾವಯವ ಕಿವಿ ಹಣ್ಣನ್ನು ಅರುಣಾಚಲ ಪ್ರದೇಶದ ಝಿರೋ ವ್ಯಾಲಿ ಫಾರ್ಮ್ಸ್ನಿಂದ ಅಲ್ಲಿನ ಆದಿ ಮಹೋತ್ಸವ ಎಂಬ ರಾಷ್ಟ್ರೀಯ ಬುಡಕಟ್ಟು ಉತ್ಸವದಲ್ಲಿ ಬಿಡುಗಡೆ ಮಾಡಲಾಗಿದೆ. * ಈ ಮಹೋತ್ಸವನ್ನು ದೆಹಲಿಯ INA ನ ದಿಲ್ಲಿ ಹ್ಯಾಟ್ನಲ್ಲಿ ನಿಯೋಜಿಸಲಾಗಿತ್ತು. * ಪ್ರಸ್ತುತ ಈ ಕಿವಿ ಹಣ್ಣನ್ನು ಅರುಣಾಚಲ ಪ್ರದೇಶ ಸರ್ಕಾರ ಹಾಗೂ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ಜೊತೆಯಾಗಿ ಈ ಮಹೋತ್ಸವ ಸಮಾರಂಭವನ್ನು ನಡೆಸಿಕೊಟ್ಟಿವೆ. * ಪ್ರಸ್ತುತ ಕೇಂದ್ರ ಸರ್ಕಾರದ ಈಶಾನ್ಯ ರಾಜ್ಯಗಳ ಯೋಜನೆಯಾದ 'ಮಿಷನ್ ಆರ್ಗಾನಿಕ್ ವ್ಯಾಲ್ಯೂ ಚೈನ್ ಡೆವಲಪ್ಮೆಂಟ್ ಫಾರ್ ನಾರ್ತ್ ಈಸ್ಟ್ ರೀಜನ್' ಅಡಿಯಲ್ಲಿ ಈ 'ಕಿವಿಹಣ್ಣಿನ ಸಾವಯವ ಪ್ರಮಾಣೀಕರಣ' ಪಡೆದುಕೊಂಡ ಭಾರತದ 1 ನೇ ರಾಜ್ಯ ಅರುಣಾಚಲ ಪ್ರದೇಶ.