Job Description: * ಪ್ರಸ್ತುತ 'ವಿಶಿಷ್ಟ' ಮುಖ ಗುರುತಿಸುವ ತಂತ್ರಜ್ಞಾನವನ್ನು ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಆರಂಭಿಸಿದ್ದಾರೆ, ಈ ಮುಖ ಗುರುತಿಸುವ ತಂತ್ರಜ್ಞಾನವು ಪಿಂಚಣಿದಾರರಿಗೆ ಜೀವ ಪ್ರಮಾಣಪತ್ರದ ಪುರಾವೆಯಾಗಿ ತನ್ನ ಕಾರ್ಯ ನಿರ್ವಹಿಸಲಿದೆ ಎಂದು ತಿಳಿದು ಬಂದಿದೆ. * ಈ ತಂತ್ರಜ್ಞಾನದಿಂದಾಗಿ ನಿವೃತ್ತಿ ಹೊಂದಿದ, ಹಾಗೂ ವಯಸ್ಸಾದ ನಾಗರಿಕರಿಗೆ ಜೀವನವನ್ನು ಸುಲಭಗೊಳಿಸಲು ಸಹಾಯ ಮಾಡಲಿದೆ. * ಪ್ರಸ್ತುತ ಪಿಂಚಣಿದಾರರು ಪಿಂಚಣಿಯನ್ನು ಪಡೆಯಲು ಪ್ರತಿ ವರ್ಷವೂ ತಮ್ಮ ಜೀವನ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ, ಇದೀಗ ಪಿಂಚಣಿಗಳ ಸಚಿವಾಲಯ ಈ ತಂತ್ರಜ್ಞಾನದ ಮೂಲಕ ಸಿಬ್ಬಂದಿಗಳ ಡಿಜಿಟಲ್ ಪ್ರಮಾಣಪತ್ರವನ್ನು ನೀಡುವ ಸೌಲಭ್ಯವನ್ನು ಜಾರಿಗೆ ತಂದಿದೆ. * ಈ ತಂತ್ರಜ್ಞಾನವನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಸಹಯೋಗದೊಂದಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಭಿವೃದ್ಧಿಪಡಿಸಿದೆ. * ಪ್ರಸ್ತುತ ಡಿಜಿಟಲ್ ಜೀವನ ಪ್ರಮಾಣಪತ್ರಗಳನ್ನು ನೀಡುವ ಉಪಕ್ರಮವನ್ನು ಪಿಂಚಣಿ ಹಾಗೂ ಪಿಂಚಣಿದಾರರ ಕಲ್ಯಾಣ ಇಲಾಖೆ ಆರಂಭಿಸಿದೆ. * ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI)ವನ್ನು 2016 ರ ನಿಬಂಧನೆಗಳ ಅಡಿಯಲ್ಲಿ 2016 ರ ಜುಲೈ. 12 ರಂದು ಸ್ಥಾಪನೆ ಮಾಡಲಾಗಿದೆ, ಇದೀಗ ಇದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. * ಪ್ರಸ್ತುತ ಭಾರತದ ಎಲ್ಲಾ ನಿವಾಸಿಗಳಿಗೆ ಆಧಾರ್ ಗುರುತಿನ ಸಂಖ್ಯೆಗಳನ್ನು (UID) ನೀಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI)ವನ್ನು ರಚಿಸಲಾಗಿದೆ.