Job Description: * ಪ್ರಸ್ತುತ 2015 ರಿಂದ ಟ್ವಿಟರ್ ಸಹ-ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಜ್ಯಾಕ್ ಡಾರ್ಸೆ ಅವರು ಇದೇ ನವೆಂಬರ್. 29 ರಂದು ತಮ್ಮ CEO ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದಾರೆ. * ಜ್ಯಾಕ್ ಡಾರ್ಸೆ ಅವರು ಟ್ವಿಟರ್ ಸಂಸ್ಥೆಯ ಜೊತೆಗಿನ ಸರಿ ಸುಮಾರು 16 ವರ್ಷಗಳ ಅವಧಿಯನ್ನು ಕೊನೆಗೊಳಿಸಿದ್ದಾರೆ. * ಇದೀಗ ಕಂಪನಿಯ ಮಂಡಳಿಯು ಟ್ವಿಟರ್ ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಪರಾಗ್ ಅಗರವಾಲ್ ಅವರನ್ನೇ ಟ್ವಿಟರ್ ಸಂಸ್ಥೆಯ ಮುಂದಿನ ಉತ್ತರಾಧಿಕಾರಿಯಾಗಿ ನೇಮಕ ಮಾಡಿದೆ. * ಪರಾಗ್ ಅಗರವಾಲ್ ಅವರು ಈ ಮೊದಲು ಟ್ವಿಟ್ಟರ್ ಗೆ ಸೇರ್ಪಡೆ ಯಾಗುವ ಮೊದಲು ಅಂದರೆ 2006 ರಿಂದ 2010 ರ ನಡುವೆ, ಇವರು ಮೈಕ್ರೋಸಾಫ್ಟ್ ರಿಸರ್ಚ್, Yahoo! ಸಂಸ್ಥೆಗಳಲ್ಲಿ ಡೇಟಾ ನಿರ್ವಹಣೆ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು. * ಅಗರವಾಲ್ ಅವರು ಭಾರತದ ಐಐಟಿ ಬಾಂಬೆಯಿಂದ ಬಿ.ಟೆಕ್ ಮತ್ತು ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿಗಳನ್ನು ಪಡೆದಿದ್ದಾರೆ, ಇಲ್ಲಿಯವರೆಗೆ ಇವರು ಟ್ವಿಟ್ಟರ್ ಸಂಸ್ಥೆಯ ಅಭಿವೃದ್ಧಿ ವೇಗವನ್ನು ಹೆಚ್ಚಿಸಲು ಕಂಪನಿಯಾದ್ಯಂತ ಯಂತ್ರ ಕಲಿಕೆಯ ಸ್ಥಿತಿಯನ್ನು ವೃದ್ಧಿಸುವ ಉಪಕ್ರಮಗಳಿಗೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.