Job Description: * ಪ್ರಸ್ತುತ ಅರ್ಜೆಂಟೀನಾದ ಫುಟ್ಬಾಲ್ ಆಟಗಾರರಾದ ಲಯೊನೆಲ್ ಮೆಸ್ಸಿ ಅವರು 7 ನೇ ಬಾರಿ ಪ್ರತಿಷ್ಠಿತ ಬಾಲನ್ ಡಿ'ಓರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಈ ಬಾಲನ್ ಡಿ'ಓರ್ ಪ್ರಶಸ್ತಿಯನ್ನು ಫ್ರಾನ್ಸ್ ಫುಟ್ಬಾಲ್ ನೀಡುತ್ತದೆ, ಲಯೊನೆಲ್ ಮೆಸ್ಸಿ ಅವರು ಈ ಮೊದಲು 2009, 2010, 2011, 2012, 2015 ಹಾಗೂ 2019 ರಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. * ಮೆಸ್ಸಿ ಅವರು ಈ ಹಿಂದಿನ ವರ್ಷ ಜುಲೈ ತಿಂಗಳಲ್ಲಿ ಅರ್ಜೆಂಟೀನಾಗೆ ಪ್ರಥಮ ಬಾರಿಗೆ ಕೋಪಾ ಅಮೇರಿಕ ಟ್ರೋಫಿಯನ್ನು ಗೆದ್ದುಕೊಟ್ಟ ನಂತರ ಈ ಪ್ರಶಸ್ತಿ ಲಭಿಸಿದೆ, ಮೆಸ್ಸಿ ಅವರು ಒಟ್ಟಾರೆ 7 ನೇ ಡಿ'ಓರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಮಹಿಳಾ ವಿಭಾಗದಲ್ಲಿ ಈ ಬಾಲನ್ ಡಿ'ಓರ್ ಪ್ರಶಸ್ತಿಯನ್ನು ಸ್ಪೈನ್ನ ಫುಟ್ಬಾಲ್ ಆಟಗಾರ್ತಿ ಅಲೆಕ್ಸಿಯಾ ಪುಟೆಲ್ಲಾ ಅವರು ಪಡೆದುಕೊಂಡಿದ್ದಾರೆ. * ಪ್ರಸ್ತುತ ಅಲೆಕ್ಸಿಯಾ ಅವರು ಬಾಲನ್ ಡಿ'ಓರ್ ಪ್ರಶಸ್ತಿ ಪಡೆದ 3 ನೇ ಮಹಿಳೆ ಇವರಾಗಿದ್ದಾರೆ. * ಪ್ರಸ್ತುತ 2018 ರಿಂದ ಮಹಿಳಾ ವಿಭಾಗಕ್ಕೆ ಬಾಲನ್ ಡಿ'ಓರ್ ಪ್ರಶಸ್ತಿ ನೀಡಲು ಪ್ರಾರಂಭಿಸಲಾಗಿದೆ.