Job Description: * ಇದೇ ಡಿಸೆಂಬರ್. 06 ಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ, ಅದೇ ಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ 21ನೇ ಆವೃತ್ತಿಯ ರಷ್ಯಾ-ಭಾರತ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. * ಈ ಹಿಂದಿನ ವರ್ಷ ಜರುಗಬೇಕಾಗಿರುವ ಶೃಂಗಸಭೆಯ ಕೋವಿಡ್-19 ಹಿನ್ನಲೆಯಿಂದಾಗಿ ಮುಂದೂಡಲಾಗಿತ್ತು, ಆ ಶೃಂಗಸಭೆಯ ಈ ಬಾರಿ ಜರುಗಲಿದೆ ಎಂದಿದ್ದಾರೆ. * ಅಷ್ಟೇ ಅಲ್ಲದೇ ಇದೇ ಶೃಂಗಸಭೆಯ ಸಂದರ್ಭದಲ್ಲಿ ಎರಡು ದೇಶಗಳು ರಕ್ಷಣಾ ವ್ಯಸ್ಥೆಯ ಕೆಲ ಒಪ್ಪಂದಗಳಿಗೆ ಸಹಿ ಹಾಕಲಿವೆ ಎಂದು ತಿಳಿಸಿದ್ದಾರೆ * ಈ ಶೃಂಗಸಭೆಯ ಮುಂಚಿತವಾಗಿ ಮಾಸ್ಕೋದಲ್ಲಿ ಭಾರತದ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್, ಹಾಗೂ ರಷ್ಯಾ ವಿದೇಶಾಂಗ ಸಚಿವ ಸರ್ಗೆ ಶೋಗೂ, ಜೊತೆಗೆ ವಿದೇಶಾಂಗ ಸಚಿವ ಸರ್ಗೆ ಲಾರ್ವೋ ಅವರು 2+2 ಮಾತುಕತೆ ನಡೆಸಲಿದ್ದಾರೆ.