Job Description: * ಪ್ರಸ್ತುತ ಶೃಂಗಸಭೆಯ 2 ನೇ ಆವೃತ್ತಿಯ ಗ್ಲೋಬಲ್ ಕೆಮಿಕಲ್ಸ್ ಮತ್ತು ಪೆಟ್ರೋಕೆಮಿಕಲ್ಸ್ ಮ್ಯಾನುಫ್ಯಾಕ್ಚರಿಂಗ್ ಹಬ್'ನ್ನು ಇದೇ ನವೆಂಬರ್ 25 ರಂದು ಉದ್ಘಾಟಿಸಲಾಗಿದೆ. * ಸರ್ಕಾರದ ಕಠಿಣ ಪರಿಶ್ರಮವು ಭಾರತವನ್ನು ಜಾಗತಿಕ ರಾಸಾಯನಿಕ ಮತ್ತು ಪೆಟ್ರೋ-ರಾಸಾಯನಿಕ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವರು ತಿಳಿಸಿದ್ದಾರೆ. * ಪ್ರಸ್ತುತ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ ಹಾಗೂ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯವು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸಹಯೋಗದೊಂದಿಗೆ ಹೈಬ್ರಿಡ್ ರೂಪದಲ್ಲಿ ಗ್ಲೋಬಲ್ ಕೆಮಿಕಲ್ಸ್ ಹಾಗೂ ಪೆಟ್ರೋಕೆಮಿಕಲ್ಸ್ ಮ್ಯಾನುಫ್ಯಾಕ್ಚರಿಂಗ್ (ತಯಾರಿಕ) ಹಬ್ ಶೃಂಗಸಭೆಯನ್ನು ಆಯೋಜಿಸಲಾಗಿದೆ. * ಭಾರತದ GCPMH 2021' ಶೃಂಗಸಭೆಯು ಭಾರತೀಯ ರಾಸಾಯನಿಕಗಳು ಹಾಗೂ ಪೆಟ್ರೋಕೆಮಿಕಲ್ಸ್ ಕ್ಷೇತ್ರದ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸುತ್ತಿದೆ. * ಈ ಶೃಂಗಸಭೆಯುಲ್ಲಿ ಪಾಲುದಾರರಾಗಿರುವ ರಾಜ್ಯಗಳು: ಆಂಧ್ರಪ್ರದೇಶ, ಒಡಿಶಾ, ಗುಜರಾತ್, ರಾಜಸ್ಥಾನ ಮತ್ತು ತಮಿಳುನಾಡು ರಾಜ್ಯಗಳು ಪಾಲ್ಗೊಂಡಿದ್ದವು. * ಮಹಾತ್ಮ ಗಾಂಧಿಯವರ ಸಲಹೆಯ ಮೇರೆಗೆ 1927 ರಲ್ಲಿ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ (FICCI)ನ್ನು ಸ್ಥಾಪನೆ ಮಾಡಲಾಗಿದೆ, ಹಾಗೂ ಇದು ನವದೆಹಲಿಯಲ್ಲಿ ತನ್ನ ಪ್ರಧಾನ ಕಛೇರಿಯುನ್ನು ಹೊಂದಿದೆ, ಅಷ್ಟೇ ಅಲ್ಲದೇ ಭಾರತದಲ್ಲಿ 12 ರಾಜ್ಯ ಮತ್ತು ಪ್ರಪಂಚದಾದ್ಯಂತ 8 ದೇಶಗಳಲ್ಲಿ ಕಚೇರಿಗಳನ್ನು ಸ್ಥಾಪಿಸಿದೆ.