Job Description: * ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಯುನೈಟೆಡ್ ಕಿಂಗ್ಡಂನ ವಿಜ್ಞಾನ ಸಚಿವ ಜಾರ್ಜ್ ಫ್ರೀಮನ್ ಅವರೊಂದಿಗೆ ಹಸಿರು ಇಂಧನ ಸಹಯೋಗದ ಬಗ್ಗೆ ವರ್ಚುಲ್ ಸಭೆಯ ಮೂಲಕ ಮಾತುಕತೆ ನಡೆಸಿದ್ದಾರೆ. * ಭಾರತ-ಯುಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಹಯೋಗವು ವೇಗವಾಗಿ ಬೆಳೆಯುತ್ತಿರುವ ಹಿನ್ನಲೆಯಿಂದಾಗಿ, ಎರಡೂ ದೇಶಗಳ ಜಂಟಿ ಸಂಶೋಧನಾ ಕಾರ್ಯಕ್ರಮವು ಶೂನ್ಯ ಮೂಲದಿಂದ ಆರಂಭವಾಗಿ ಇದೀಗ 300-400 ಮಿಲಿಯನ್ ಪೌಂಡ್ಗಳಿಗೆ ತಲುಪಿದೆ. * ಇದೀಗ ಭಾರತವು ಕ್ಲೀನ್ ಎನರ್ಜಿ ಮಿಷನ್, ಇಂಡಿಯಾ ಸೋಲಾರ್ ಅಲೈಯನ್ಸ್ ಎಂಬ ವಿವಿಧ ಉಪಕ್ರಮಗಳಿಂದ ಮುಂದೆ ಸಾಗುತ್ತಿದೆ. * ಸ್ವಚ್ಛ ಮತ್ತು ಹಸಿರು ಶಕ್ತಿಯಲ್ಲಿ ಭಾರತ-ಯುಕೆ ರಾಷ್ಟ್ರಗಳ ಸಹಯೋಗ: - ಅಂತಿಮ ಬಳಕೆಯ ವಲಯಗಳನ್ನು ವ್ಯಾಪಕವಾಗಿ ವಿದ್ಯುದ್ದೀಕರಿಸುವ ತಂತ್ರಜ್ಞಾನಗಳು, - ಕಾರ್ಬನ್ ಕ್ಯಾಪ್ಚರ್, ಬಳಕೆ ಮತ್ತು ಸಂಗ್ರಹಣೆ (CCUS) - ಹೈಡ್ರೋಜನ್ ಮತ್ತು ಹೈಡ್ರೋಜನ್-ಸಂಬಂಧಿತ ಇಂಧನಗಳು - ಜೈವಿಕ ಶಕ್ತಿ * ನ್ಯೂಟನ್ ಭಾಭಾ MoU ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳಂತಹ ಹಲವಾರು ಸಂಶೋಧನಾ ಕ್ಷೇತ್ರಗಳಲ್ಲಿ ಭಾರತ ಮತ್ತು ಯುಕೆ ರಾಷ್ಟ್ರಗಳ ಸಹಕಾರವನ್ನು ಮುಂದಿನ ಹಂತಕ್ಕೆ ತಲುಪಿಸಲು ಸಹಾಯ ಮಾಡುತ್ತಿದೆ ಎಂದು ತಿಳಿಸಿದ್ದಾರೆ.