Job Description: * ಪ್ರತಿ ವರ್ಷ ನವೆಂಬರ್. 26 ರಂದು ರಾಷ್ಟ್ರೀಯ ಹಾಲು ದಿನವನ್ನು ಆಚರಿಸಲಾಗುತ್ತದೆ. * ರಾಷ್ಟ್ರೀಯ ಹಾಲು ದಿನವನ್ನು ಆಚರಣೆ ಮಾಡಲು, ಡೈರಿ ಸೈನ್ಸ್ ಮತ್ತು ಟೆಕ್ನಾಲಜಿ ಕಾಲೇಜು ಹಾಗೂ ಗುರು ಅಂಗದ್ ದೇವ್ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾಲಯ ಇದೇ ನವೆಂಬರ್. 25 ಮತ್ತು 26 ರಂದು 'ಹಾಲಿನ ಕಲಬೆರಕೆ ಪರೀಕ್ಷಾ ಶಿಬಿರ'ವನ್ನು ಆಯೋಜಿಸಿವೆ. * ಈ ರಾಷ್ಟ್ರೀಯ ಹಾಲು ದಿನವನ್ನು ಭಾರತದ ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗೀಸ್ ಕುರಿಯನ್ ಅವರನ್ನು ಗೌರವಿಸಲು ಆಚರಣೆ ಮಾಡಲಾಗುತ್ತದೆ. * ಡಾ. ವರ್ಗೀಸ್ ಕುರಿಯನ್ ಅವರಿಗೆ ಗೌರವ ಸಲ್ಲಿಸಲು 2014 ರ ನವೆಂಬರ್ 26 ರಂದು ಭಾರತೀಯ ಡೈರಿ ಅಸೋಸಿಯೇಷನ್ ಹಾಗೂ ಭಾರತದ ಎಲ್ಲಾ ಡೈರಿ ಮೇಜರ್ಗಳು 'ರಾಷ್ಟ್ರೀಯ ಹಾಲು ದಿನ'ವನ್ನು ಆಚರಿಸಲು ಆರಂಭಿಸಿವೆ, ಅದೇ ದಿನವೇ ಅಂದರೆ ನವೆಂಬರ್. 26 ಡಾ. ಕುರಿಯನ್ ಅವರ ಜನ್ಮದಿನವಾಗಿದೆ ಈ ಹಿನ್ನಲೆಯಿಂದ ಆಚರಿಸಲಾಗುತ್ತಿದೆ. * ಡಾ. ಕುರಿಯನ್ ಅವರು 1973 ರಿಂದ 2006 ರ ಮಧ್ಯೆ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟಕ್ಕೆ ಸೇವೆ ಸಲ್ಲಿಸಿದ್ದಾರೆ.