Job Description: * ಪ್ರಸ್ತುತ ಅಸ್ಸಾಂ ರಾಜ್ಯ ಸರ್ಕಾರವು ತನ್ನ ರಾಜ್ಯದಲ್ಲಿನ ಸರ್ಕಾರಿ ನೌಕರರಿಗೆ 2 ದಿನ ಹೆಚ್ಚುವರಿ ರಜೆ ಘೋಷಣೆ ಮಾಡಿದೆ, ಪಸ್ತುತ ಸರ್ಕಾರಿ ನೌಕರಯಲ್ಲಿರುವ ದಂಪತಿಗಳು ಅಪ್ಪ-ಅಮ್ಮ, ಅತ್ತೆ-ಮಾವ ಇವರಿಂದ ದೂರವಾಗಿ ನೌಕರಿಗಾಗಿ ಬೇರೆ ಬೇರೆ ಕಡೆಗೆ ವಾಸವಾಗಿರುತ್ತಿರುವ ಕಾರಣದಿಂದಾಗಿ, ಅವರಿಗೆ ಕುಟುಂಬದ ಜತೆ ಕಾಲಕಳೆಯಲು ಕಾಲಾವಕಾಶ ಸಿಗುವುದಿಲ್ಲ ಎಂದು ಅಸ್ಸಾಂ ಸರ್ಕಾರ, ತನ್ನ ರಾಜ್ಯದಲ್ಲಿನ ಸರ್ಕಾರಿ ನೌಕರರಿಗೆ 2 ದಿನಗಳ ಕಾಲ ಹೆಚ್ಚುವರಿ ರಜೆಯನ್ನು ಘೋಷಣೆ ಮಾಡಿದೆ. * ಅಸ್ಸಾಂ ಮುಖ್ಯಮಂತ್ರಿ ಹಿಂತ್ ಬಿಸ್ವಾಶರ್ಮ ಅವರ ಸಚಿವ ಸಂಪುಟ ಈ ನಿರ್ಣಯವನ್ನು ಕೈಗೊಂಡಿದೆ, ಸರ್ಕಾರಿ ನೌಕರರು ತಮ್ಮ ವೃದ್ಧ ಪಾಲಕರೊಂದಿಗೆ ಸಮಯ ಕಳೆಯಲು ಪ್ರತಿ ವರ್ಷ ಹೆಚ್ಚುವರಿಯಾಗಿ ವಾರದ ರಜೆ ನೀಡುವುದಾಗಿ ತಿಳಿಸಿದ್ದಾರೆ. * ಮುಂಬರುವ ಜನೇವರಿ 6 ಮತ್ತು 7ನೇ ದಿನಾಂಕದಂದು ರಜೆಯನ್ನು ನಿಗದಿ ಮಾಡಲಾಗಿದೆ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ.