Job Description: * ಪ್ರಸ್ತುತ ಚೀನಾ ದೇಶವು ನೂತನ ಉಪಗ್ರಹ ಶಿಯಾನ್ 11 ಉಡಾವಣೆ ಪ್ರಯೋಗ ಯಶಸ್ವಿಯಾಗಿ ನಡೆಸಿದೆ ಎಂದು ತಿಳಿದು ಬಂದಿದೆ. * ಚೀನಾ ದೇಶದ ಶಿಜಿಯಾನ್ ಎಂಬ ಉಪಗ್ರಹಗಳ ಮತ್ತೊಂದು ಸರಣಿಯನ್ನು ತಂತ್ರಜ್ಞಾನ ಗುಣಮಟ್ಟ ಪರಿಶೀಲನೆಗಾಗಿ ಬಳಕೆ ಮಾಡಲಾಗುತ್ತಿದೆ, ಇತ್ತೀಚಿಗೆ ಅಕ್ಟೋಬರ್ನಲ್ಲಿ ಶಿಜಿಯಾನ್ -21'ನ್ನು ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ ಎಂದು ತಿಳಿಸಿದೆ. * ಆದರೆ, ಇದ್ದಕು ಮೊದಲಿನ ಶಿಯಾನ್ ಉಪಗ್ರಹ, ಶಿಯಾನ್ -10, ಯೋಜಿತ ಕಕ್ಷೆಗೆ ಯಶಸ್ವಿಯಾಗಿ ಉಡಾವಣೆಯಾಗಿದೆ ಆದರೆ ಈ ಉಪಗ್ರಹವು ಯಾವುದೇ ನಿಯೋಜಿತ ಕಾರ್ಯವನ್ನು ಮಾಡಿಲ್ಲ ಎಂದು ತಿಳಿಸಿದ್ದಾರೆ. * ಪ್ರಸ್ತುತ ಶಿಯನ್-11 ಉಪಗ್ರಹವನ್ನು ಮಂಗೋಲಿಯಾದ ಗೋಬಿ ಮರುಭೂಮಿಯಲ್ಲಿನ ಜಿಯುಕ್ವಾನ್ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ಕುಯಿಝೌ-1ಎ ಎಂಬ ಉಪಗ್ರಹ ಉಡಾವಣೆ ವಾಹಕದ ಮೂಲಕ ಉಡಾವಣೆ ಮಾಡಲಾಗಿದೆ ಎಂದು ಚೀನಾ ಸುದ್ದಿವಾಹಿನಿ ಗ್ಲೋಬಲ್ ಟೆಲಿವಿಷನ್ ನೆಟ್ವರ್ಕ್ ವರದಿ ಮಾಡಿದೆ. * ಪ್ರಸ್ತುತ ಚೀನಾ ದೇಶವು ಶಿಯಾನ್-11 ಉಪಗ್ರಹವನ್ನು ಪರೀಕ್ಷೆ ಸಲುವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದೆ, ಬೇರೆ ಯಾವುದೇ ಮಾಹಿತಿಯನ್ನು ಚೀನಾ ಬಹಿರಂಗ ಪಡಿಸಿಲ್ಲ.