Job Description: * ಪ್ರಸ್ತುತ ಭಾರತೀಯ ನೌಕಾಪಡೆಗೆ 'ಐಎನ್ಎಸ್(INS) ವೇಲಾ' ಎಂಬ ಸಬ್ಮರೀನ್ ಸೇರ್ಪಡೆ ಮಾಡಲಾಗಿದೆ, ಸಬ್ಮರೀನ್'ಗೆ ಮುಂಬಯಿಯ ನೌಕಾನೆಲೆಯಲ್ಲಿನ ನೌಕಾ ದಳದ ಕಮಾಂಡರ್ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಚಾಲನೆಯನ್ನು ನೀಡಿದರು. * ಪ್ರಸ್ತುತ ಕಲ್ವರಿ ಕ್ಲಾಸ್ ಜಲಾಂತರ್ಗಾಮಿ ಯೋಜನೆ-75ರ ಅಡಿಯಲ್ಲಿ ಭಾರತೀಯ ನೌಕಾಪಡೆ ಸೇರ್ಪಡೆಯಾಗಬೇಕಾಗಿರುವ '6' ಜಲಾಂತರ್ಗಾಮಿ ನೌಕೆಯ ಪೈಕಿ ಈ INS ವೇಲಾ 4ನೇ ಜಲಾಂತರ್ಗಾಮಿ ನೌಕೆ ಯಾಗಿದೆ. * ಈ ಐಎನ್ಎಸ್(INS) ವೇಲಾ ಜಲಾಂತರ್ಗಾಮಿ ನೌಕೆಯನ್ನು ಮುಂಬಯಿಯ ಮ್ಯಾಜಗಾನ್ ಡಾಕ್ ಶಿಪ್ಬಿಲ್ಡರ್ ಲಿ. ಸಂಸ್ಥೆಯು ಫ್ರಾನ್ಸ್ನ ಎಂ/ಎಸ್ ನಾವಲ್ ಗ್ರೂಪ್ ಸಂಸ್ಥೆಯು ಜಂಟಿಯಾಗಿ ನಿರ್ಮಿಸಿವೆ, ಈ ನೌಕೆಯನ್ನು ನಿರ್ಮಿಸಲು ಸರಿ ಸುಮಾರು 43 ಸಾವಿರ ಕೋಟಿ ರೂ. ವೆಚ್ಚ ತಗುಲಿದೆ ಎಂದು ತಿಳಿಸಿದ್ದಾರೆ. * ದೇಶೀಯ ತಂತ್ರಜ್ಞಾನದಲ್ಲಿಯೇ ಈ '6' ಸಬ್ಮರೀನ್ಗಳನ್ನು ನಿರ್ಮಾಣಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಫ್ರಾನ್ಸ್ ದೇಶದಿಂದ ಈ ನೌಕೆಗಳಷ್ಟೇ ಅಲ್ಲದೇ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗುತ್ತಿದೆ ಅವುಗಳಲ್ಲಿ ಇನ್ನು '6' ಯುದ್ಧ ವಿಮಾನ ಮುಂಬರುವ ಜನೇವರಿಯಲ್ಲಿ ಹರಿಯಾಣದ ಅಂಬಾಲಕ್ಕೆ ಬಂದು ತಲುಪಲಿವೆ ಎಂದು ತಿಳಿಸಿದ್ದಾರೆ.