Job Description: * ಇತ್ತೀಚಿಗಷ್ಟೇ ಹೊಸದಾಗಿ ಚುನಾಯಿತವಾದ ಸ್ವೀಡನ್ ನ ಪ್ರಧಾನಿ ಮ್ಯಾಗ್ಡಲೀನಾ ಆಂಡರ್ಸನ್ ಅವರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಮ್ಯಾಗ್ಡಲೀನಾ ಆಂಡರ್ಸನ್ ಅವರು ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳ ನಂತರ ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದಾರೆ. * ಪ್ರಸ್ತುತ ಸ್ವೀಡನ್ ನ ಗ್ರೀನ್ ಪಾರ್ಟಿ ಪಕ್ಷವು ತಮ್ಮ ಸಮ್ಮಿಶ್ರ ಸರ್ಕಾರವನ್ನು ತೊರೆಯುವುದಾಗಿ ಹೇಳಿಕೆ ನೀಡಿದ ನಂತರ ಈ ಕ್ರಮವನ್ನು ಮ್ಯಾಗ್ಡಲೀನಾ ಆಂಡರ್ಸನ್ ಅವರು ಕೈಗೊಂಡಿದ್ದಾರೆ. * ಸ್ವೀಡನ್'ನ ಮೊದಲ ಮಹಿಳಾ ಪ್ರಧಾನಿ ಇವರಾಗಿದ್ದಾರೆ. * ಆಂಡರ್ಸನ್ ಅವರು ಇತ್ತೀಚಿಗಷ್ಟೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು, ತದನಂತರ ಕೆಲ ಗಂಟೆಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. * ಆಂಡರ್ಸನ್ ಅವರು ಜೂನಿಯರ್ ಈಜು ಚಾಂಪಿಯನ್ ಆಗಿದ್ದರು, ಹಾಗೂ 1996 ರಲ್ಲಿನ ಪ್ರಧಾನ ಮಂತ್ರಿ ಗೋರಾನ್ ಪರ್ಸನ್ ಅವರ ರಾಜಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ, ಅಷ್ಟೇ ಅಲ್ಲದೇ ಕಳೆದ 7 ವರ್ಷಗಳಿಂದ ಹಣಕಾಸು ಸಚಿವರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. * ಪ್ರಸ್ತುತ ಇಲ್ಲಿಯವರೆಗೆ ನಾರ್ಡಿಕ್ ರಾಜ್ಯಗಳ ಪೈಕಿ ಸ್ವೀಡನ್ ಮಾತ್ರ ಮಹಿಳಾ ಪ್ರಧಾನಿಯನ್ನು ಹೊಂದಿರದ ದೇಶವಾಗಿತ್ತು.