Job Description: * ಪ್ರಸ್ತುತ ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಯಲ್ಪಡುವ ಲಾಹೋರ್, ಇದೀಗ ಜಗತ್ತಿನಲ್ಲೇ ಅತಿಹೆಚ್ಚು ಮಾಲಿನ್ಯಕ್ಕೆ ಒಳಗಾದ ನಗರ ಎಂಬ ಕಳಂಕವನ್ನು ಪಡೆದಿದೆ. * ಪ್ರಸ್ತುತ ಸ್ವಿಟ್ಜರ್ಲೆಂಡ್ ದೇಶದ 'ಪ್ಲಾಟ್ಫಾರ್ಮ್ ಐಕ್ಯೂಏರ್' ಎಂಬ ವಾಯು ಗುಣಮಟ್ಟದ ಮೇಲೆ ನಿಗಾ ಇಡುವ ಕಂಪನಿಯು ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ. * ಇದೀಗ ವಿಶ್ವದ ಅತ್ಯಂತ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಪಾಕಿಸ್ತಾನದ ಲಾಹೋರ್ ಅಗ್ರ ಸ್ಥಾನ ಪಡೆದುಕೊಂಡಿದೆ. * ಪ್ರಸ್ತುತ ಅಮೇರಿಕದ ಎಕ್ಯೂಐ ಎಂಬ ಸಂಸ್ಥೆಯ ನಗರಗಳ ವಾಯು ಗುಣಮಟ್ಟ ಅಳೆಯುತ್ತದೆ, ಇದರ ಪ್ರಕಾರ ಪಾಕಿಸ್ತಾನದ ಲಾಹೋರ್ನ ವಾಯು ಗುಣಮಟ್ಟ ಸೂಚ್ಯಂಕ '203' ಎಂದು ದಾಖಲಾಗಿದೆ. * ಇದರ ನಂತರದ ಸ್ಥಾನದಲ್ಲಿ ಭಾರತದ ದೆಹಲಿ ನಗರದ ವಾಯು ಗುಣಮಟ್ಟವು ಸೂಚ್ಯಂಕ ಪ್ರಕಾರ '183' ಎಂದು ಸಂಸ್ಥೆ ತಿಳಿಸಿದೆ. * ಅಷ್ಟೇ ಅಲ್ಲದೇ ಬಾಂಗ್ಲಾದೇಶದ ಢಾಕಾ ನಗರವು ವಾಯು ಗುಣಮಟ್ಟ ಸೂಚ್ಯಂಕ ಪ್ರಕಾರ '169' ಪಡೆದು 3 ನೇ ಸ್ಥಾನದಲ್ಲಿದೆ. * ಭಾರತದ ಕೋಲ್ಕತ್ತ ನಗರವು ಸೂಚ್ಯಂಕ ಪ್ರಕಾರ '168' ಪಡೆದು 4 ನೇ ಸ್ಥಾನದಲ್ಲಿದೆ ಎಂದು ವಾಯು ಗುಣಮಟ್ಟ ಅಳೆಯುವ ಸಂಸ್ಥೆ ತಿಳಿಸಿದೆ.